ಸುದ್ದಿ

ತಾಳಿ ಕಟ್ಟುವಾಗ ಪ್ರೇಮಿಯ ಎಂಟ್ರಿಗೆ ಸಿಕ್ತು ಟ್ವಿಸ್ಟ್! ಕೊನೆಗೂ ಒಂದಾದ ಪ್ರೇಮಿಗಳು…

By admin

November 19, 2018

ರಾತ್ರಿ ಎಲ್ಲಾ ಮದುವೆ ಗಂಡಿನ ಜೊತೆ ಮಾಡಿದ ಶಾಸ್ತ್ರ ಸಂಪ್ರದಾಯಗಳಿಗೆ ನಗು ನಗುತ್ತಲೇ ನವ ವಧು ಪಾಲ್ಗೊಂಡಿದ್ದಳು.ಆದರೆ ಬೆಳಿಗ್ಗೆ ತಾಳಿ ಕಟ್ಟುವ ಮಹೂರ್ತದಲ್ಲಿ ತಾನು ಪ್ರ್ರಿತಿಸುತ್ತಿದ್ದ ಹುಡುಗ ಬಂದು ಎದುರಿಗೆ ನಿಂತಿರುವುದನ್ನ ನೋಡಿದ್ದಾಳೆ.

ಆತ ಅಳುವುದನ್ನು ಕಂಡು ಮನಸ್ಸು ಕರಗಿ ನಾನು ಈ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು, ನಾನು ನನ್ನ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಳು ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರೇ ಮುಂದೇ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ.

ಈ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲ ಪಟ್ಟಣದ ವಿಶ್ವಶಾಂತಿ ಸಮುದಾಯ ಭವನದಲ್ಲಿ ಭಾನುವಾರ ನಡೆದಿದೆ.ರಾತ್ರಿ ಆರತಕ್ಷತೆ ಯಾವುದೇ ಸಮಸ್ಯಯಿಲ್ಲದೆ ತುಂಬಾ ಭರ್ಜರಿಯಾಗೇ ನಡೆದಿದೆ.ಆದರೆ ಮರುದಿನ ಮಹುರ್ತದ ಸಂದರ್ಭದಲ್ಲಿ ವಧುವಿನ ಪ್ರಿಯಕರ ಸಂಜು ಪ್ರತ್ಯಕ್ಷವಾಗಿದ್ದನು. ಹಾಗಾಗಿ ವಧು ಪದ್ಮಪ್ರೀಯ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಮದುವೆ ನಿರಾಕರಿಸಿದ್ದಳು.

ಫೇಸ್ ಬುಕ್ ಮುಖಾಂತರ ಸಂಜು ಮತ್ತು ಪದ್ಮಪ್ರಿಯಾ ಪರಿಚಯವಾಗಿದ್ದು ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿ ಮಾಡುತ್ತಿದರು.ಇದು ಮನೆಯವರಿಗೆ ಗೊತ್ತಾದ ನಂತರ ಪದ್ಮಪ್ರಿಯಾ ತಂದೆ ತಾಯಿಗಳು ಅವರ ಸಂಬಂದಿಯೇ ಆಗಿದ್ದ ರಂಗನಾಥ್‍ನೊಂದಿಗೆ ಮದುವೆ ನಿಶ್ಚಯಿಸಿದ್ದರು. ಪ್ರಿಯಕರ ಬಂದಿದ್ದರಿಂದ ಎರಡು ಕುಟುಂಬದವರ ನಡುವೆ ಕೆಲಕಾಲ ಗಲಾಟೆ ನಡೆದಿತ್ತು.

ನಂತರ ಈ ಗಲಾಟೆಯ ನಡುವೆ ಬಂದ ಪೊಲೀಸರು ಸಂಜು ಹಾಗೂ ಪದ್ಮಪ್ರಿಯಾ ಇಬ್ಬರನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅಲ್ಲಿ ವಧು ಪದ್ಮಪ್ರಿಯ ನಿಮ್ಮ ತಂದೆ ತಾಯಿಗಳು ಬಂದ್ರೆ ನಿನ್ನ ಜೊತೆ ಬರುವುದಾಗಿ ಸಂಜುವಿಗೆ ಹೇಳಿದ್ದಾರೆ.ನಂತರ ನೆಲಮಂಗಲ ಪಟ್ಟಣ ಗಣೇಶನ ಗುಡಿಯಲ್ಲಿ ಸ್ನೇಹಿತರು ಹಾಗೂ ಕೆಲ ಸಂಬಂಧಿಗಳ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಮಾಡಲಾಗಿದೆ.