ಸುದ್ದಿ

ಪ್ರೀತಿಯೇ ವಿಷವಾಯ್ತ..!ಪ್ರೇಯಸಿ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಸಾವು….

By admin

May 20, 2019

ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ ಯುವಕನೊಡನೆ ಮದುವೆಗೆ ಸಿದ್ದವಾಗಿದ್ದಳು.

ಇದರಿಂದ ಸಿದ್ದರಾಜು ಮನನೊಂದಿದ್ದನು. ಇದೀಗ ತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಜು ತಾನು ಸಾಯುವ ಮುನ್ನ ಸೆಲ್ಫಿ ವೀಡಿಯೋ ಮಾಡಿಟ್ಟು ಹೋಗಿದ್ದಾನೆ. ಆ ವೀಡಿಯೋದಲ್ಲಿರುವಂತೆ “ತನ್ನ ಪ್ರಿಯತಮೆಯೇ ನನಗೆ ವಿಷ ತಂದು ಕೊಟ್ಟು ಕುಡಿಯುವಂತೆ ಹೇಳಿದಳು. ಅಲ್ಲದೆ ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದಿಡುವಂತೆಯೂ ಹೇಳಿದ್ದಳು. ಎಂದು ವಿವರಿಸಿದ್ದಾನೆ. ಅಲ್ಲದೆ ತಾನು ಬರೆದ ಡೆತ್ ನೋಟ್ ಹಾಗೂ ಆಕೆ ತಂದಿದ್ದಳೆನ್ನಲಾದ ವಿಷದ ಬಾಟಲ್ ಸಹ ಪ್ರದರ್ಶಿಸಿದ್ದಾನೆ.

“ನನ್ನನ್ನು ಪ್ರೀತಿಸಿ ವಂಚಿಸಿದ ಆ ಯುವತಿ ಮದುವೆಯಾಗಬಾರದು, ಆಕೆ, ಆಕೆಯ ತಾಯಿ ಹಾಗೂ ಅಜ್ಜಿಯೇ ನನ್ನ ಸಾವಿಗೆ ನೇರ ಕಾರಣವಾಗಿದ್ದು ಆವರನ್ನೆಲ್ಲಾ ಜೈಲಿಗೆ ಹಾಕಬೇಕು” ಎಂದು ಯುವಕ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಘಟನೆ ಕುರಿತಂತೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.