ಸುದ್ದಿ

ಇನ್ಮುಂದೆ ಎಟಿಎಂ ನಿಂದ ಕ್ಯಾಶ್ ವಿತ್ ಡ್ರಾ ಮಾಡಲು ಈ ನಿಯಮವನ್ನು ತಪ್ಪದೆ ಪಾಲಿಸಬೇಕು…!

By admin

August 28, 2019

ಬ್ಯಾಂಕ್ ನಿಂದ  ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ .

ನವದೆಹಲಿ ,ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ.

ಹೌದು.. ಖ್ಯಾತ ಬ್ಯಾಕಿಂಗ್ ಸೇವಾ ಸಂಸ್ಥೆ ಕೆನರಾ ಬ್ಯಾಂಕ್ ಇಂತಹುದೊಂದು ನಿಯಮ ಜಾರಿಗೆ ಮುಂದಾಗಿದ್ದು, ಎಟಿಎಂಗಳಿಂದ ಹೆಚ್ಚುತ್ತಿರುವ ವಂಚನೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ ಇಂತಹುದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ.

ಹೊಸ ನಿಯಮದ ಪ್ರಕಾರ ಕೆನರಾ ಬ್ಯಾಂಕ್ ನಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚಿನ ಎಟಿಎಂನಿಂದ ಹಣವನ್ನು ಹಿಂಪಡೆಯುವಾಗ ಎಟಿಎಂ ಪಿನ್ ಸಂಖ್ಯೆಯೊಂದಿಗೆ ಒಟಿಪಿಯನ್ನು ನಮೂದಿಸುವುದು ಸಹ ಕಡ್ಡಾಯ. 10 ಸಾವಿರಕ್ಕೂ ಅಧಿಕ ಮೊತ್ತದ ಹಣವನ್ನು ವಿತ್ ಡ್ರಾ ಮಾಡುವಾಗ ಗ್ರಾಹಕರ ನೋಂದಾಯಿತ ದೂರವಾಣಿ ಸಂಖ್ಯೆಗೆ ಮೆಸೇಜ್ ಮೂಲಕ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬರುತ್ತದೆ. ಅದನ್ನು ಎಟಿಎಂ ನಲ್ಲಿ ನಮೂದಿಸಿದರೆ ಮಾತ್ರ ಹಣ ವಿತ್ ಡ್ರಾ ಆಗುತ್ತದೆ.  ಆಗಸ್ಟ್ 20ರಂದೇ ಕೆನರಾ ಬ್ಯಾಂಕ್ ಈ ವಿಚಾರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.