7 ವರ್ಷ ಕಾದು, ಕೊನೆಗೂ ವಿಶ್ವದ ಅತೀ ಎತ್ತರದ ಬಿಲ್ಡಿಂಗ್ ಗೆ ಮಿಂಚು ಬಡಿಯೋದನ್ನ ಸೆರೆಹಿಡಿದ.
By admin
January 18, 2020
ಸಂಯುಕ್ತ ಅರಬ್ ಎಮಿರೇಟ್ಸ್ (UAE) ಸದ್ಯ ಭಾರೀ ಮಳೆ, ಗುಡುಗು ಹಾಗೂ ಸಿಡಿಲುಗಳಿಗೆ ಸಾಕ್ಷಿಯಾಗಿದೆ.
ಇದೇ ವೇಳೆ ಒಂದು ವಿಶಿಷ್ಟ ಚಿತ್ರವೊಂದನ್ನು ಸೆರೆಹಿಡಿದಿರುವ ಛಾಯಾಗ್ರಾಕನೊಬ್ಬ ತನ್ನ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ.
ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆತ್ತಿ ಮೇಲೆ ಸಿಡಿಲು ಬಡಿದಿದೆ.ಈ ಅದ್ಭುತ ಘಳಿಗೆಯನ್ನು ಸೆರೆ ಹಿಡಿದ ಝೋಹೆಯ್ಬ್ ಅಂಜುಮ್, ಈ ಘಳಿಗೆಗೆಂದು ಸತತ ಏಳು ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದರಂತೆ. ದುಬಾಯ್‌ನಲ್ಲಿ ಮಳೆ ಆದಾಗಲೆಲ್ಲ ರಾತ್ರಿಗಳನ್ನು ಆಚೆಯೇ ಕಳೆಯುತ್ತಿದ್ದ ಈತನ ಕನಸು ಈಗ ಈಡೇರಿದೆ.
ಸಿಡಿಲು ಬಡಿದ ಘಟನೆಯ ವೇಳೆ, ಖುದ್ದು ಕಟ್ಟಡದ ಮೇಲಿಂದ ಕಿಡಿ ಹೊತ್ತಿಕೊಂಡಂತೆ ಭಾಸವಾಗುವ ಈ ಕ್ಷಣಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದು, ಇದೀಗ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.