ಸುದ್ದಿ

ಎಲ್ಐಸಿ ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ…!ಇದನ್ನೊಮ್ಮೆ ಓದಿ..,

By admin

October 10, 2019

ಭಾರತೀಯ ಜೀವ ವಿಮಾ ನಿಗಮ ಪಾಲಿಸಿ ಹೂಡಿಕೆದಾರರ  ಹಣ ಭದ್ರವಾಗಿದೆ.ಸುಳ್ಳು ವದಂತಿಗಳನ್ನು  ನಂಬಬೇಡಿ ಎಂದು ನಿಗಮದಿಂದ ಸ್ಪಷ್ಟನೆ ನೀಡಲಾಗಿದೆ.

ಭಾರತೀಯ ವಿಜಯ ವಿಮಾ ನಿಗಮ(ಎಲ್ಐಸಿ) ನಷ್ಟದಲ್ಲಿದೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದರ  ಕುರಿತಾಗಿ ಸ್ಪಷ್ಟನೆ ನೀಡಿರುವ ಎಲ್ಐಸಿ ಇದು ಸಂಪೂರ್ಣ ಸುಳ್ಳು ಎಂದು ಹೇಳಿಕೆ ನೀಡಿದೆ.

ಎಲ್ಐಸಿ ಭಾರಿ ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದೆ.ಪಾಲಿಸಿದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಂಸ್ಥೆಯ ಆರ್ಥಿಕ ಶಕ್ತಿ ಉತ್ತಮವಾಗಿದೆ ಎಂದುಹೇಳಲಾಗಿದೆ,ಸುಳ್ಳು ವದಂತಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಎಲ್ಐಸಿನಷ್ಟದಲ್ಲಿದ್ದು, ಪಾಲಿಸಿದಾರರ ಕೋಟ್ಯಂತರ ರೂ. ವಿಮೆ ಮೊತ್ತ ಮುಳುಗುವ ಭೀತಿ ಎದುರಾಗಿದೆ ಎಂದುಹೇಳಲಾಗಿತ್ತು. ಆದರೆ ಈ ಕುರಿತ ವದಂತಿಗಳಿಗೆ ತೆರೆ ಎಳೆದ ಎಲ್ಐಸಿ ಪಾಲಿಸಿದಾರರ ಹಣ ಭದ್ರವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ .