ಸಿಂಧನೂರು : ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಇಚ್ಛೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಕಾನೂನು ತಿದ್ದುಪಡಿ ಮಾಡಬೇಕು ಎಂದು ರೈತ ಯುವ ಮುಖಂಡ ರವಿಗೌಡ ಮಲ್ಲದಗುಡ್ಡ ಆಗ್ರಹಿಸಿದ್ದಾರೆ ರಾಜ್ಯದಲ್ಲೂ ಸಂವಿಧಾನಾತ್ಮಕವಾಗಿ ವಜಾಗೊಳಿಸುವ ಕೆಲಸ ಆಗಬೇಕು. ಕ್ಷೇತ್ರದ ಅಭಿವೃದ್ದಿ ಮರೆತು ಸೀಟಿಗಾಗಿ ಪ್ರತಿದಿನ ಕಚ್ಚಾಡುತ್ತಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾದ ಕ್ಷೇತ್ರದಲ್ಲಿ ಅವರ ವಿರುದ್ದ ಎರಡನೇ ಸ್ತಾನದಲ್ಲಿ ಸೋತಿರುವ ಅಭ್ಯರ್ಥಿಯನ್ನು ಆ ಕ್ಷೇತ್ರದ ಮುಂದಿನ ಶಾಸಕರು ಎಂದು ಕಾನೂನು ಜಾರಿಗೆ ಬರಬೇಕು.
ಆಗ ಮಾತ್ರ ಪಕ್ಷೆ ನಿಷ್ಠೆ ಹಾಗು ಕ್ಷೇತ್ರದ ಜನಪರ ಅಭಿವೃದ್ದಿ ಕೆಲಸಗಳಾಗಳು ಸಾದ್ಯವಾಗುತ್ತದೆ. ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕರು ಕಚ್ಚಾಡುತ್ತಿರುವುದನ್ನು ನೋಡಿದರೆ ರೈತರಿಗೆ ಇವರು ಏನು ಮಾಡುತ್ತಾರೆ ಎಂಬ ಅನುಮಾನ ಮೂಡುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಶಾಸಕರ ವಿರುದ್ದ ಕಾನೂನು ತರುವುದು ಅವಶ್ಯವಾಗಿದೆ ಎಂದರು ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಬರಗಾಲ ಹಾಗು ಧನ ಕರುಗಳಿಗೆ ಮೇವು ಇಲ್ಲದೆ ರೈತರು ಕಂಗಾಲಾಗಿದ್ದಾರೆ . ಇದನ್ನು ಮರೆತು ತಮ್ಮ ಹಾಗು ಅವರ ಕುಟುಂಬ ಬೆಳವಣಿಗೆಗಾಗಿ ರಾಜಕಾರಣ ಮಾಡುತ್ತಿರುವ ರಾಜಕೀಯ ವ್ಯಕ್ತಿಗಳನ್ನು ದೂರ ಮಾಡಬೇಕು ಹಾಗು ರೈತರ ಪರವಾಗಿರುವ ಚಿಂತಕರನ್ನು ಬೆಳೆಸಬೇಕು. ಆಗ ಮಾತ್ರ ರಾಜಕೀಯ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ರಾಜ್ಯದ ರೈತರು ಮತ್ತಷ್ಟು ಬರಗಾಲ ಎದುರಿಸಬೇಕಾಗುತ್ತದೆ ಎಂದರು.
ಮತ್ತು ಇದಕ್ಕೆ ಸಂಭದಿಸಿದಂತೆ ಭಾರತ ದೇಶದಲ್ಲಿರುವ 29 ರಾಜ್ಯಗಳ ಎಲ್ಲಾ ವಿಧಾನಸಭೆ ಸದಸ್ಯರಿಗೆ ಅವರದೇ ಆದಂತಹ ಕಾನೂನು ವ್ಯವಸ್ಥೆ ಮತ್ತು ಸಂವಿಧಾನ ವ್ಯವಸ್ಥೆ ಇದೆ ಅದರೆ ಇತ್ತಿಚೆಗೆ ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲ ಶಾಸಕರು ತಮ್ಮ ತಮ್ಮ ವಯಕ್ತಿಕ ವಿಚಾರವಾಗಿ ಮತ್ತು ನಮಗೆ ಮಂತ್ರಿ ಸ್ತಾನ ಕೊಟ್ಟಿಲ್ಲವೆಂಬ ಕಾರಣಕ್ಕೆ ಅಸಮಾಧಾನಗೊಂಡು ತಮ್ಮನ್ನು ಗೆಲ್ಲಿಸಿದ ಜನರನ್ನು ಧಿಕ್ಕರಿಸಿ ಮತ್ತು ತಮ್ಮ ಕ್ಷೇತ್ರದ ಅಭಿವೃದ್ದಿಯನ್ನು ಮರೆತು ಕೊನೆಗೆ ರಾಜಿನಾಮೆ ನೀಡಿ ಕರ್ನಾಟಕ ರಾಜ್ಯದ ಮರ್ಯಾದೆಯನ್ನು ವಿಶ್ವಕ್ಕೆ ಬಿತ್ತರಿಸಿದ ಶಾಸಕರು ಹೊರ ರಾಷ್ಟ್ರದವರು ನಮ್ಮ ಕರ್ನಾಟಕ ರಾಜಕೀಯ ಚಿತ್ರಣವನ್ನು ನೋಡಿ ನಗುವಂತಾಗಿದೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಭಾರತ ಸರ್ಕಾರ ಸಂವಿಧಾನಕ್ಕೆ ಸ್ವಲ್ಪತಿದ್ದುಪಡಿ ಆಗಬೇಕಿದೆ .
ರಾಜಿನಾಮೆ ನೀಡಿರುವ ಆಯಾ ಮತಕ್ಷೇತ್ರ ಮತ್ತೆ ಚುನಾವಣೆ ಜನರ ತೆರಿಗೆ ಹಣ ಪೋಲ್ ಮಾಡುವ ಬದಲು ಹಿಂದಿನ ಚುನಾವಣೆಯಲ್ಲಿ 2 ನೇ ಸ್ತಾನದಲ್ಲಿ ಸೋತಿರುವ ಅಭ್ಯರ್ತಿಯನ್ನು ಶಾಸಕನೆಂದು ಆಯ್ಕೆಮಾಡಿದರೆ ಯಾರು ರಾಜಿನಾಮೆ ನೀಡುವುದಿಲ್ಲ ಹಾಗು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಿಟ್ಟು ಹೋಗುವುದಿಲ್ಲ ಇದಕ್ಕೆ ರಾಜಿನಾಮೆ ನೀಡಿರುವ ಅಭ್ಯರ್ಥಿಗಳು ಒಪ್ಪದಿದ್ದರೆ ತಮ್ಮ ತಮ್ಮ ಕ್ಷೇತ್ರದ ಚುನಾವಣೆ ವೆಚ್ಚವನ್ನು ಅವರವರೆ ಭರಿಸಬೇಕಾಗಿದೆ ಹಾಗು ಇಗಾಗಲೇ ರಾಜಿನಾಮೆ ನೀಡಿ ರಾಜ್ಯದ ಜನರ ಮತ್ತು ರಾಜಧಾನಿ ಬೆಂಗಳೂರಿನಲ್ಲಿರುವ ಶಕ್ತಿ ಸೌದವೆಂದೆ ಹೆಸರಾದ ವಿಧಾನ ಸೌಧದ ಶಕ್ತಿ ಕಳೆದಿರುವ ರಾಜಿನಾಮೆ ಕೊಟ್ಟ ಎಲ್ಲಾ ಶಾಸಕರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಿ ಶಾಸಕರಿಗೆ ಎಚ್ಚರ ಕಲಿಸಬೇಕಾಗಿದೆ.