ಲಿಂಬೆಯನ್ನು ಅಡುಗೆಯ ರುಚಿಗೆ ಮತ್ತು ಔಷಧಿಗೆ ಬಳಸುತ್ತಾರೆ, ನಮ್ಮ ಆರೋಗ್ಯಕ್ಕೂ ಸಹ ಲಿಂಬೆ ಉತ್ತಮ ಆರೈಕೆ. ಸಾಮಾನ್ಯವಾಗಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲರೂ ಸಿಪ್ಪೆಯನ್ನು ಬಿಸಾಡುತ್ತಾರೆ ಆದರೆ ನಮಗೆ ತಿಳಿದಿಲ್ಲ ಲಿಂಬೆ ರಸಕ್ಕಿಂತ ಹತ್ತು ಪಟ್ಟು ಸಿಪ್ಪೆಯಲ್ಲಿ ಹತ್ತಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು.
ಲಿಂಬೆಯ ಸಿಪ್ಪೆಯಲ್ಲಿ ಮಿಟಮಿನ್ಸ್ , ಖನಿಜ, ಕರಗದೇ ಇರುವಂತಹ ನಾರುಗಳು ಹಾಗೂ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಹಾಗೂ ಮಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸುತ್ತದೆ. ಹಾಗಾಗಿ ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ ಇದನ್ನು ಬಳಸಿಕೊಳ್ಳಿ ಇದರಿಂದ ಹಲವು ಪ್ರಯೋಜನಗಳಿವೆ ಅವುಗಳನ್ನು ತಿಳಿಯೋಣ ಬನ್ನಿ.
ಕ್ಯಾನ್ಸರ್ ನಿಂದ ತಡೆಗಟ್ಟುತ್ತದೆ: ಕ್ಯಾನ್ಸರ್ ನಿಂದ ತಡೆಗಟ್ಟಲು ಹಾಗೂ ಕ್ಯಾನ್ಸರ್ ಗೆ ಚಿಕಿತ್ಸೆಯಾಗಿ ಲಿಂಬೆಸಿಪ್ಪೆಯನ್ನು ಬಳಸಲಾಗುತ್ತಿದೆ. ಲಿಂಬೆಸಿಪ್ಪೆ ಕ್ಯಾನ್ಸರ್ ಪೀಡಿತ ಜೀವಕೋಶಗಳ ವಿರುದ್ದ ಹೋರಾಡುವ ಶಕ್ತಿಯಿದೆ. ಒಂದು ಅಧ್ಯಯನ ಪ್ರಕಾರ ಕ್ಯಾನ್ಸರ್ ಪೀಡಿತ ಜೀವಕೋಶಗಳಿರುವ ವ್ಯಕ್ತಿಗಳು ಲಿಂಬೆಸಿಪ್ಪೆಯನ್ನು ಸೇವಿಸುವ ಮೂಲಕ ಇವುಗಳು ಅಭಿವೃದ್ದಿಯಾಗುವುದನ್ನು ತಡೆಗಟ್ಟಿವೆ. ಕ್ಯಾನ್ಸರ್ ಪೀಡಿತ ಜೀವಕೋಶಗಳು ಆಮ್ಲೀಯ ವಾತಾವರಣದಲ್ಲಿ ಶೀಘ್ರವಾಗಿ ಅಭಿವೃದ್ದಿ ಹೊಂದುತ್ತವೆ.
ಮೂಳೆಗಳ ಆರೋಗ್ಯ : ಲಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿವೆ. ಇವು ಮೂಳೆಗಳ ಆರೋಗ್ಯ ಉತ್ತಮಗೊಳಿಸುತ್ತವೆ ಹಾಗೂ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗೂ ನೆರವಾಗುತ್ತವೆ. ವಿಶೇಷವಾಗಿ ಉರಿಯೂತದ ಸಂಧಿವಾತ (inflammatory polyarthritis) ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವ ಓಸ್ಟಿಯೋಪೋರೋಸಿಸ್, ಮತ್ತು ರ್‍ಹೂಮಟಾಯ್ಡ್ ಸಂಧಿವಾತ ಮೊದಲಾದ ತೊಂದರೆಗಳ ಚಿಕಿತ್ಸೆಗೆ ನೆರವಾಗುತ್ತವೆ.
ತೂಕ ಇಳಿಕೆ : ಲಿಂಬೆ ಸಿಪ್ಪೆಯ ಸೇವನೆಯಿಂದ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ನೀಡುತ್ತದೆ. ಇದರಲ್ಲಿರುವ ಪೆಕ್ಟಿನ್ ಎಂಬ ಪೋಷಕಾಂಶ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಕೊಬ್ಬನ್ನು ಕರಗಿಸಿ ತೂಕ ಇಳಿಕೆಗೆ ನೆರವಾಗುತ್ತದೆ.
ಲಿಂಬೆಸಿಪ್ಪೆಯನ್ನು ಸೇವಿಸುವ ವಿಧಾನಲಿಂಬೆರಸವನ್ನು ಹಿಂಡುವ ಮುನ್ನ ಸಿಪ್ಪೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಕತ್ತರಿಸಿ ಹಿಂಡಿ ಸಿಪ್ಪೆಯನ್ನು ಪ್ರತ್ಯೇಕಿಸಿಟ್ಟುಕೊಳ್ಳಿ. ಬಳಿಕ ಇವನ್ನು ಅತಿ ಚಿಕ್ಕದಾದ ಚೂರುಗಳನ್ನಾಗಿಸಿ ಎಲ್ಲೆಲ್ಲಿ ಹುಳಿ ಅಗತ್ಯವಿದೆಯೋ ಅಲ್ಲಿ ಈ ತುಂಡುಗಳನ್ನು ಬಳಸಬಹುದು. ಇನ್ನೊಂದು ವಿಧಾನದಲ್ಲಿ ಕೊಂಚ ನೀರಿನಲ್ಲಿ ಲಿಂಬೆಯ ಸಿಪ್ಪೆಗಳನ್ನು ಬೇಯಿಸಿ ಕೊಂಚವೇ ಸಕ್ಕರೆ ಬೆರೆಸಿ ಪಾಕವನ್ನಾಗಿಸಿ. ಇದು ತಣಿದ ಬಳಿಕ ಇದನ್ನು ನೇರವಾಗಿ ಸೇವಿಸಬಹುದು. ಇನ್ನೊಂದು ವಿಧಾನದಲ್ಲಿ, ಟೀ ಕುದಿಸುವಾಗ ಲಿಂಬೆಯ ಸಿಪ್ಪೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಕುದಿಸಿ ಈ ಟೀಯನ್ನು ಸೇವಿಸಬಹುದು. ಮಸಾಲೆ ಅರೆಯುವಾಗ ಹುಳಿಯ ಬದಲು ಲಿಂಬೆ ಸಿಪ್ಪೆಯನ್ನು ಸೇರಿಸಿ ಅರೆಯಬಹುದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.