ಸ್ಪೂರ್ತಿ

ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಹಳ್ಳಿ ಹುಡುಗಿ ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ ಪ್ರಥಮ..!

By admin

April 16, 2019

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ.

ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್‌ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕುವ ಕೆಲಸ ಕೂಡ ಮಾಡುತ್ತಿದ್ದು, ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಅತ್ಯುತ್ತಮ ದರ್ಜೆ ಗಳಿಸಿದ್ದಾರೆ. ಆ ಮೂಲಕ ತನ್ನ ತಂದೆ ತಾಯಿಗಳಿಗೆ ಹೆಮ್ಮೆ ತಂದಿದ್ದಾರೆ.

ಕೊಟ್ಟೂರಿನ ಇಂದು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕುಸುಮ ಪ್ರತಿದಿನ ಕಾಲೇಜಿಗೆ ಹೋಗಿ ಬಂದು ತನ್ನ ವಿಧ್ಯಾಭ್ಯಾಸದ ಸಮಯದಲ್ಲೇ ತಂದೆಗೆ ಸಹಾಯ ಮಾಡುವ ಸಲುವಾಗಿ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಕಡಿಮೆ ಆದಾಯದಲ್ಲಿ ಸೈಕಲ್ ಶಾಪ್ ನಡೆಸಿಕೊಂಡು ಜೀವನ ಸಾಗುತ್ತಿರುವ ದೇವೇಂದ್ರಪ್ಪನವರಿಗೆ ೫ ಜನ ಪುತ್ರಿಯರಲ್ಲಿ ಕುಸುಮಾ ಕೂಡ ಒಬ್ಬರು. ಕಡಿಮೆ ಆದಾಯ ಒಂದಿದ್ದರೂ ಸಹ ಕುಸುಮಾರವರಿಗೆ ಓದಲು ಯಾವುದೇ ರೀತಿಯ ಬಡತನದ ಅಡ್ಡಿ ಬರಲಿಲ್ಲ.

ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಬಂದಿರುವುದರ ಬಗ್ಗೆ ಸಂತಸ ಹಂಚಿಕೊಂಡಿರುವ ಕುಸುಮಾ ಬಿಡುವಿನ ವೇಳೆಯಲ್ಲಿ ಸೈಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು ಸಮಯದ ಮಿತೀ ಇಲ್ಲದೆ ತನಗೆ ಇಷ್ಟವಾದ ವಿಷಯ ಓದುತ್ತಿದ್ದೆ.ಜೊತೆಗೆ ತಂದೆ ತಾಯಿ ಮತ್ತು ನನ್ನ ಗುರುಗಳ ಆಶಿರ್ವಾದದಿಂದ ಇದು ಸಾಧ್ಯವಾಗಿದೆ ಎಂದು ಕುಸುಮ ಹೇಳುತ್ತಾರೆ.

ಕಲಾ ವಿಭಾಗದಲ್ಲಿ 600 ಕ್ಕೆ ಬರೋಬ್ಬರಿ 594 ಅಂಕಗಳನ್ನು ಪಡೆದು ಪ್ರಥಮ rank ಪಡೆದಿದ್ದಾರೆ ಕುಸುಮ ಉಜ್ಜಿನಿ. ಇವರು ಪಿಯುಸಿ ಕಲಿತ ಇಂದು ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 rank ಪಟ್ಟಿಯಲ್ಲಿದ್ದಾರೆ. ಕಳೆದ ಕೆಲ ವರ್ಷದಿಂದಲೂ ಕಲಾ ವಿಭಾಗದಲ್ಲಿ ಇಂದು ಕಾಲೇಜಿನ ವಿದ್ಯಾರ್ಥಿಗಳೇ ರಾಜ್ಯಕ್ಕೆ ಟಾಪ್.