ಸುದ್ದಿ

ಕೋಟ್ಯಧಿಪತಿಯಲ್ಲಿ 10ನೇ ತರಗತಿ ವಿದ್ಯಾರ್ಥಿ; ಗೆದ್ದ ಹಣ ಶಾಲಾ ಕಾಂಪೌಂಡ್​ಗೆ,.!

By admin

November 05, 2019

ಪ್ರತಿ ವರ್ಷ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ, ಆದರೆ ದನಗಳು ದಾಳಿನಡೆಸಿ ಎಲ್ಲವೂ ಹಾಳಾಗುತ್ತವೆ. ಹಾಗಾಗಿ,ಶಾಲೆಗೆ ಕಾಂಪೌಂಡ್ ಕಟ್ಟಿಸಲು ಮೊದಲ ಆದ್ಯತೆ ನೀಡುತ್ತೇನೆ..’ನಟ ಪುನೀತ್ ರಾಜ್​ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿ 6.4 ಲಕ್ಷ ರೂ. ಗೆದ್ದ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಅವರ ಮನದಾನದ ಮಾತುಗಳಿವು.

ರಿಯಾಲಿಟಿ ಶೋಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿ ತೇಜಸ್ ಜಿಲ್ಲೆಗೆ ಕೀರ್ತಿತಂದಿದ್ದಾನೆ. ಕಟ್ಟಾಯ ಶಾಲೆಗೆ ಭೇಟಿ ನೀಡಿದ್ದ ಕೋಟ್ಯಧಿಪತಿ ತಂಡ ಎಲ್ಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಹೆಚ್ಚು ಅಂಕಗಳಿಸಿದ ತೇಜಸ್, ನಟ ಪುನೀತ್  ರಾಜ್​ಕುಮಾರ್ ಎದುರಿಗೆ ಹಾಟ್  ಸಿಟ್ನ​ಲ್ಲಿ ಕುಳಿತು 15ರಲ್ಲಿ11 ಪ್ರಶ್ನೆಗೆ ಸರಿ ಉತ್ತರ ನೀಡಿ ಹಣ ಗೆದ್ದಿರುವುದು ಮಾತ್ರವಲ್ಲದೆ ತನ್ನ ಶಾಲೆಯ ಮೇಲಿನ ಪ್ರೀತಿ ವ್ಯಕ್ತಪಡಿಸಿ ಜನರ ಮನ ಗೆದ್ದಿದ್ದಾನೆ.ತೇಜಸ್ ಕೋಟ್ಯಧಿಪತಿ ಹಾಟ್ ಸೀಟ್​ಗೆ ಏರಿದ್ದು ಶಾಲೆಯ ಶಿಕ್ಷಕರಿಗೆಲ್ಲ ಅತೀ ವಸಂತಸ ತಂದಿದೆ.

ಡಾಕ್ಟರ್  ಆಗುವ ಆಸೆ: ನಾನು ಗೆದ್ದಿರುವ 6.4 ಲಕ್ಷರೂಪಾಯಿಯಲ್ಲಿ ಅಕ್ಕನ ಮದುವೆ ಮಾಡುತ್ತೇನೆ ಹಾಗೂ ಶಾಲೆಯ ಕಾಂಪೌಂಡ್ ಕಟ್ಟಿಸುತ್ತೇನೆ ಎನ್ನುತ್ತಾನೆ ವಿದ್ಯಾರ್ಥಿ ತೇಜಸ್. ಬಡ ಕುಟುಂಬದಲ್ಲೇ ಬೆಳೆದ ನಾನು ಲಕ್ಷಾಂತರ ರೂಪಾಯಿ ನೋಡುತ್ತಿರುವುದು ಇದೇ ಮೊದಲು. ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದೇನೆ.

ಕನ್ನಡದ ಕೋಟ್ಯಧಿಪತಿ ಮೂಲಕ ರಾಜ್ಯಾದ್ಯಂತ ಪರಿಚಿತನಾಗಲು ಸಹಕರಿಸಿದ ಶಾಲೆಯ ಎಲ್ಲ ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತೇಜಸ್ ಹೇಳಿದ್ದಾನೆ.ತಂದೆ ನಂಜಪ್ಪ ಕೃಷಿ ಕೆಲಸಮಾಡಿಕೊಂಡಿದ್ದು, ತಾಯಿ ಗೌರಮಣಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ತೇಜಸ್ ಬುದ್ಧಿವಂತ. ಸರ್ಕಾರಿ ಶಾಲೆ ಮೇಲಿನ ಆತನ ಪ್ರೀತಿ ಮೆಚ್ಚುವಂಥದ್ದು.