ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿರೋ ಕಿಸ್ ಸಿನಿಮ ಬಿಡುಗಡೆಯಾಗಿದೆ.ತುಂಟ ತುಟಿಗಳ ಆಟೋಗ್ರಾಫ್ ಅಂತ ಟ್ಯಾಗ್ಲೈನ್ ಇಟ್ಕೊಂಡು ,ರಾಜ್ಯಾದ್ಯಂತ ಸಿನಿಪ್ರಿಯರಿಂದ ಮುತ್ತಿನ ಸುರಿಮಳೆನೇ ಪಡೆದುಕೊಳ್ತಿರೋ ಈ ಹೊಸ ಜೋಡಿಗೆ,ಸಾಥ್ ಕೊಡಲು ಬರ್ತಿದಾರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ನಟ.
ನರಾಚಿಯಿಂದ ಪ್ರೇಮಿಗಳತ್ತ ಪಯಣ ಬೆಳೆಸಿದ ನಮ್ಮ ರಾಕಿಂಗ್ ಸ್ಟಾರ್, ರಾಕಿಭಾಯ್ ಯಶ್ ಈ ಹೊಸ ಜೋಡಿಗೆ, ಇದೀಗ ರಾಕಿಂಗ್ ಸ್ಟಾರ್ ಯಶ್ ಸಾಥ್ ಕೊಡ್ತಿದ್ದಾರೆ. ಕೆಜಿಎಫ್ ಸೆಟ್ನಿಂದ ಡೈರೆಕ್ಟಾಗಿ ಕಿಸ್ ಜೋಡಿಯನ್ನ ನೋಡೋಕ್ಕೆ ಥಿಯೇಟರ್ಗೆ ಬರ್ತಿದ್ದಾರೆ.
ಕಿಸ್..ಟೈಟಲ್ ಮತ್ತು ಟ್ರೈಲರ್ನಿಂದ ಸಖತ್ ಸುದ್ದಿ ಮಾಡಿದ್ದ ಚಿತ್ರ… ಸದ್ಯ ರಾಜ್ಯಾದ್ಯಂತ ತೆರೆಕಂಡು ಸಕ್ಸಸ್ಫುಲ್ಲಾಗಿ ಮುನ್ನುಗ್ತಿದೆ.. ಸಿನಿಪ್ರಿಯರು ಈಗಾಗ್ಲೇ ಚಿತ್ರವನ್ನ ಅಪ್ಪಿಒಪ್ಪಿಕೊಂಡಿದ್ದಾಗಿದೆ.. ಇದೀಗ ಸೆಲೆಬ್ರೆಟಿಗಳ ಸರದಿ.. ಒಬ್ರಲ್ಲ ಒಬ್ರು ಕಿಸ್ ಚಿತ್ರವನ್ನ ನೋಡಿ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ.
ನಾಳೆ ನಗರದ ಓರಾಯನ್ ಮಾಲ್ನಲ್ಲಿ ಬೆಳಿಗ್ಗೆ 10.30ರ ಶೋನಲ್ಲಿ, ಸಿನಿ ಅಭಿಮಾನಿಗಳ ಜೊತೆ ಕೂತು ಯಶ್ ಸಿನಿಮಾ ನೋಡಲಿದ್ದಾರೆ.. ಈ ಹಿಂದೆ ಕೂಡ ರಾಕಿಂಗ್ ಸ್ಟಾರ್ ಕಿಸ್ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ರು.. ಇದೀಗ ಕಿಸ್ ಸಿನಿಮಾ ನೋಡ್ತಿರೊದು ಗೆಳೆಯ ಎ,ಪಿ ಅರ್ಜುನ್ ಮತ್ತು ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.