ಸಿನಿಮಾ

Tv9 ಕೆಜಿಎಫ್ ಚಿತ್ರ ಪ್ರಮೋಷನ್ ಏಕೆ ಮಾಡಲಿಲ್ಲ ಎಂಬ ಸತ್ಯ ಬಯಲು…!

By admin

December 29, 2018

ಕನ್ನಡದ ಹೆಮ್ಮೆ ಕೆಜಿಎಫ್ ಚಿತ್ರದ ಯಶಸ್ಸು ಕಾಣಲಿ ಎಂದು ಎಲ್ಲಾ ಕನ್ನಡಿಗರು ಪ್ರೋತ್ಸಾಹ ನೀಡಿದರು. ಸ್ಟಾರ್ ವಾರ್ ಮರೆತು ಎಲ್ಲಾ ನಟರುಗಳ ಅಭಿಮಾನಿಗಳು ಯಶ್ ಗೆ ಸಪೋರ್ಟ್ ಮಾಡಿದ್ದಾರ್ರೆ. ಹಾಗೆ ಎಲ್ಲಾ ಸುದ್ದಿವಾಹಿನಿಗಳು ಈ ಸಿನಿಮಾವನ್ನು ಪ್ರಮೋಷನ್ ಮಾಡಿದವು.

ಆದರೆ ಟಿವಿ9 ಮಾತ್ರ ಈ ಚಿತ್ರದ ಬಗ್ಗೆ ಒಂದು ದಿನವೂ ವಿಶೇಷ ಕಾರ್ಯಕ್ರಮವನ್ನು ಮಾಡಲಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. Tv9 ಸುದ್ದಿ ವಾಹಿನಿಯ ಏಕೆ ಹೀಗೆ ಮಾಡಿತು ಎಂಬುದಕ್ಕೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ ಚಿತ್ರತಂಡದವರು ಆ ಚಿತ್ರದ ಪ್ರಚಾರಕ್ಕಾಗಿ ಮತ್ತು ಸುದ್ದಿವಾಹಿನಿಗಳಲ್ಲಿ ಆ ಚಿತ್ರವು ಪ್ರಮೋಷನ್ ಮಾಡಲು ಹಣವನ್ನು ನೀಡುತ್ತಾರೆ. ಆದರೆ ಕೆಜಿಎಫ್ ಯಾವ ಸುದ್ದಿ ವಾಹಿನಿಗಳಿಗು ಸಹ ಹಣ ನೀಡಲಿಲ್ಲ ಎನ್ನಲಾಗಿದೆ.ಆದರೂ ಸಹ ಆದರೂ ಸಹ ಬೇ ಟಿವಿ ಟಿವಿ ಪಬ್ಲಿಕ್ ಟಿವಿ ದಿಗ್ವಿಜಯ ಹೀಗೆ ಹಲವಾರು ಕನ್ನಡ ಸುದ್ದಿವಾಹಿನಿಗಳು ಕೆಜಿಎಫ್ ಸಿನಿಮಾ ಪ್ರಮೋಷನ್ ಮಾಡಿದ ವು.

ಆದರೆ ಕೆಜಿಎಫ್ ತಂಡ tv9 ಜೊತೆ ಯಾವುದೇ ಬಿಜಿನೆಸ್ ಮಾಡಿಕೊಳ್ಳದ ಕಾರಣ tv9 ಕೆಜಿಎಫ್ ಚಿತ್ರದ ಪ್ರಮೋಷನ್ ನನ್ನು ಮಾಡಲಿಲ್ಲ. ಇದು ಕೆಜಿಎಫ್ ಅಭಿಮಾನಿಗಳಲ್ಲಿ ಆಕ್ರೋಶ ಮೂಡಲು ಕಾರಣವಾಯಿತು. ಅಲ್ಲದೆ ಟಿವಿ9, ಟಿಆರ್ ಪಿ ರೇಟಿಂಗ್ ಪ್ರಕಾರ ಮೊದಲಿನಿಂದಲೂ ಕನ್ನಡದಲ್ಲಿ 1 ನೇ ಸ್ಥಾನದಲ್ಲಿರುವ ಸುದ್ದಿ ವಾಹಿನಿ.

ಕೇವಲ ಫಿಲ್ಮಿ ಫಂಡಾ ದಂತಹ ಕಾರ್ಯಕ್ರಮಗಳಲ್ಲಿ ಕೆಜಿಎಫ್ ಬಗ್ಗೆ tv9 ತೋರಿಸಿದರು ಇತರೆ ಚಾನಲ್ ಗಳ ರೀತಿ ದಿನಗಟ್ಟಲೆ ಅಥವಾ ವಿಶೇಷ ಕಾರ್ಯಕ್ರಮ ಮಾಡಿ ತುಂಬಾ ಹೊತ್ತು ಕೆಜಿಎಫ್ ಚಿತ್ರದ ಬಗ್ಗೆ ತೋರಿಸಿಲ್ಲ ಎಂದು ಯಶ್ ಫ್ಯಾನ್ಸ್ ಕೋಪಗೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ಗಳಲ್ಲಿ tv9 ಒಂದು ಕನ್ನಡ ವಿರೋಧಿ ಚಾನೆಲ್ ಎಂದು ಆಕ್ರೋಶಗೊಂಡ ಅಭಿಮಾನಿಗಳು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ.