ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ.
ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್ ಮಾಡಲಾಗಿತ್ತು. ಹಿಂದಿ ಅವತರಣಿಕೆ ಸಿನಿಮಾಗಾಗಿ 1989ರಲ್ಲಿ ಬಿಡುಗಡೆಯಾಗಿದ್ದ ತ್ರಿದೇವ್’ ಚಿತ್ರದಗಲಿ ಗಲಿ’ ಹಾಡನ್ನು ಬಳಸಲಾಗಿದೆ.
1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.
ಹಿಂದಿ ಅವತರಣಿಕೆಯನ್ನು ಎಕ್ಸೆಲ್ ಮೀಡಿಯಾ, ಎಎ ಮೂವೀಸ್ ನಲ್ಲಿ ಫರ್ಹಾನ್ ಅಖ್ತರ್, ರಿತೇಶ್ ಸಿದ್ವಾನಿ ರಿಲೀಸ್ ಮಾಡ್ತಿದ್ದು, ಈಗಾಗಲೇ ದೊಡ್ಡ ಮಟ್ಟದ ಕ್ರೇಜ್ ಶುರುವಾಗಿದೆ.