ನಮ್ಮ ದೇಶವನ್ನ ದೇವಾಲಯಗಳ ಗೂಡು ಏಂದು ಕರೆಯುತ್ತೇವೆ ಮತ್ತು ಅತೀ ಹೆಚ್ಚು ದೇವಾಲಯಗಳನ್ನ ಹೊಂದಿರುವ ದೇಶಗಳಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಮ್ಮ ದೇಶದ ಜನರು ದೇವರನ್ನು ಹೆಚ್ಚಾಗಿ ನಂಬುತ್ತಾರೆ ಮತ್ತು ದೇಶದಲ್ಲಿ ದೇವರ ಆರಾಧನೆ ಹೆಚ್ಚಾಗಿ ನಡೆಯುತ್ತಾರೆ, ಯಾವುದೇ ಶುಭಕಾರ್ಯ ನಡೆಯಬೇಕು ಅಂದರೆ ಮೊದಲು ದೇವರ ಒಪ್ಪಿಗೆಯನ್ನ ಪಡೆದು ನಂತರ ಮುಂದಿನ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಹಿಂದಿನ ಕಾಲದಿಂದಲೂ ನಮ್ಮ ಜನರು ದೇವರ ವಿಚಾರವಾಗಿ ಅನೇಕ ಆಚಾರ ವಿಚಾರಗಳನ್ನ ಪಾಲನೆ ಮಾಡಿಕೊಂಡು ಬಂದಿದ್ದಾರೆ, ದೇವರನ್ನ ನಂಬಿದರೆ ನಮಗೆ ಲಾಭ ಇದೆಯೇ ಹೊರತು ನಷ್ಟ ಇಲ್ಲ ಅನ್ನುವದೂ ಅದೆಷ್ಟೋ ಭಾರಿ ಸಾಭೀತು ಕೂಡ ಆಗಿದೆ.
ನಮ್ಮ ಭಾರತದಲ್ಲಿ ಕಾಶಿಯನ್ನ ಬಹಳ ಪವಿತ್ರವಾದ ಸ್ಥಳ ಎಂದು ಭಾವಿಸುತ್ತೇವೆ ಮತ್ತು ಹುಟ್ಟಿದ್ದ ಪ್ರತಿಯೊಬ್ಬ ವ್ಯಕ್ತಿಗೂ ಒಮ್ಮೆಯಾದರೂ ಕಾಶಿಯಾತ್ರೆಯನ್ನ ಮಾಡಬೇಕು ಅನ್ನುವ ಬಯಕೆ ಇದ್ದೆ ಇರುತ್ತದೆ, ಕಾಶಿಯಾತ್ರೆಯನ್ನ ಮಾಡಿದರೆ ಜನರ ಜೀವನ ಸಾರ್ಥಕ ಆಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಕಾಶಿಯಲ್ಲಿ ಶಿವನನ್ನ ಪೂಜೆ ಮಾಡಲಾಗುತ್ತದೆ, ಇನ್ನು ಕಾಶಿಯ ವಾರಾಣಸಿಯಲ್ಲಿ ಭೂಮಿಯನ್ನ ಅಗೆಯುವಾಗ ಕೆಲವು ಆಶ್ಚರ್ಯ ಪಡುವಂತಹ ವಸ್ತುಗಳು ಸಿಕ್ಕಿದು ಜನರು ಅದನ್ನ ನೋಡಿ ಆಶ್ಚರ್ಯಚಿಕಿತರಾಗಿದ್ದಾರೆ.
ಹಾಗಾದರೆ ಕಾಶಿಯ ವಾರಾಣಸಿಯಲ್ಲಿ ಭೂಮಿಯನ್ನ ಅಗೆಯುವಾಗ ಸಿಕ್ಕಿದ ವಸ್ತುಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ. ಸ್ನೇಹಿತರೆ ನಾವು ಹೇಳುವ ಈ ಘಟನೆ ನಡೆದಿರುವುದು ವಾರಾಣಸಿಯಲ್ಲಿ, ವಾರಾಣಸಿ ಅನ್ನುವ ಪ್ರದೇಶ ಸುಮಾರು 4000 ವರ್ಷಗಳ ಹಳೆಯದಾದ ಪ್ರದೇಶವಾಗಿದೆ, ಅಲ್ಲಿನ ಭೂಮಿ ಬಹಳ ಹಳೆಯದಾದ ಭೂಮಿ ಆದಕಾರ ಅಲ್ಲಿನ ಭೂಮಿಯನ್ನ ಅಗೆದರೆ ಹಿಂದಿನ ಕಾಲದ ಯಾವುದಾದರೂ ವಸ್ತು ಸಿಗಬಹುದು ಎಂದು ಅರಿತ ವಿಜ್ಞಾನಿಗಳು ಅಲ್ಲಿನ ಕೆಲವು ಪ್ರದೇಶದ ಭೂಮಿಯನ್ನ ಅಗೆಯಲು ಕೆಲವು ತಂಡಗಳನ್ನ ನಿಗಧಿ ಮಾಡಲಾಗುತ್ತದೆ.
ಇನ್ನು ಹೀಗೆ ಆ ತಂಡಗಳು ಭೂಮಿಯನ್ನ ಅಗೆಯುವಾಗ ಮೂರ್ತಿಗಳು, ಮಣ್ಣಿನ ಪಾತ್ರೆಗಳು, ವಿಗ್ರಹಗಳು ಮತ್ತು ಶಿಲೆಗಳು ದೊರೆತಿವೆ, ಇನ್ನು ಮಣ್ಣಿನ ಪಾತ್ರೆಗಳನ್ನ ನೋಡಿ ಈ ಪ್ರದೇಶದಲ್ಲಿ ಬಹಳ ವರ್ಷಗಳಿಂದ ಜನರು ವಾಸ ಮಾಡುತ್ತಿದ್ದಾರೆ ಅನ್ನುವ ನಿರ್ಧಾರಕ್ಕೆ ಬರಲಾಯಿತು. ಇನ್ನು ಹೀಗೆ ಭೂಮಿಯನ್ನ ಅಗೆಯುವಾಗ ಅಲ್ಲಿ ಒಂದು ಸುಂದರವಾದ ಶಿವಲಿಂಗ ದೊರೆತಿದೆ ಮತ್ತು ಆ ಶಿವಲಿಂಗವನ್ನ ನೋಡಿದ ವಿಜ್ಞಾನಿಗಳು ಈ ಶಿವಲಿಂಗ ಸುಮಾರು ನಾಲ್ಕು ಸಾವಿರ ವರ್ಷಳ ಹಿಂದಿನದ್ದು ಎಂದು ಅಂದಾಜು ಮಾಡಿದ್ದಾರೆ. ಇನ್ನು ಈ ಶಿವಲಿಂಗವನ್ನ ನೋಡಿದ ಜನರು ಶಿವಲಿಂಗಕ್ಕೆ ಕೈ ಮುಗಿದಿದ್ದಾರೆ ಮತ್ತು ಇದು ಬಹಳ ಶಕ್ತಿಶಾಲಿಯಾದ ಶಿವಲಿಂಗ ಅನ್ನುವ ಕಾರಣಕ್ಕೆ ಆ ಶಿವಲಿಂಗಕ್ಕೆ ಒಂದು ದೇವಾಲಯವನ್ನ ನಿರ್ಮಾಣ ಮಾಡಿ ಅಲ್ಲಿ ದಿನನಿತ್ಯ ಈ ಶಿವಲಿಂಗಕ್ಕೆ ಪೂಜೆ ನಡೆಯಬೇಕು ಅನ್ನುವ ಜನರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.