ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಲ್ಲಿ ಪ್ರತಿ ಕಿಲೋಮೀಟರ್ ಗೂ ನಮ್ಮ ಸಂಸ್ಕೃತಿ , ಸಂಪ್ರದಾಯ, ಭಾಷೆ , ಪದ್ಧತಿ ಬದಲಾಗುತ್ತ ಹೋಗುತ್ತದೆ. ಇಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿ, ಕಲೆ , ಆಚಾರ ವಿಚಾರಗಳು ಇವೆ. ಅಂತೆಯೇ ತನ್ನದೇ ಆದ ವಿಶಿಷ್ಟ ಅಡುಗೆ ಶೈಲಿಗಳನ್ನು ಈ ರಾಜ್ಯಗಳು ಹೊಂದಿವೆ.
ಇಡ್ಲಿ , ವಡೆ, ಮಸಾಲ ದೋಸೆ ತಮಿಳು ನಾಡಿನಲ್ಲಿ ಸುಪ್ರಸಿದ್ದ. ಈ ತಿಂಡಿಗಳ ಹೆಸರು ಕೇಳಿದೊಡನೆಯೇ ಹೊರ ಜನರಿಗೆ ನೆನಪಾಗುವುದು ತಮಿಳುನಾಡು. ತಮಿ ಳಿಗರು ಈ ಭೋಜನಗಳನ್ನು ಕಂಡು ಹಿಡಿದವರು ತಾವೇ ಎಂದು ಹೇಳಿಕೊಳ್ಳುತ್ತಾರೆ.
ಆದರೆ ಸತ್ಯವೇನೆಂದರೆ, ಇಡ್ಲಿ ವಡಾ ಮಸಾಲ ದೋಸೆಯ ಮೂಲ ಕರ್ನಾಟಕ. ಉಡುಪಿಯ ದೇವಸ್ಥಾನಗಳ ಬೀದಿಗಳಲ್ಲಿ ಹುಟ್ಟಿ ಕೊಂಡ ತಿಂಡಿಗಳಿವು… ಇದು ಅಕ್ಷರಶಃ ಸತ್ಯ. ಬರೀ ಈ ತಿಂಡಿಗಳು ಮಾತ್ರವಲ್ಲ ಬಿಸಿಬೇಳೆ ಬಾತ್, ಉಡುಪಿಯ ರುಚಿಯಾದ ಸಾಂಬಾರ್, ಹುಳಿ ಹೀಗೆ ಎಲ್ಲದರ ಮೂಲವೂ ಉಡುಪಿಯೆ….
ಅಷ್ಟೇ ಅಲ್ಲ ಮೈಸೂರಿನ ಮೈಸೂರ್ ಪಾಕ್, ಮದ್ದೂರು ವಡೆ, ಧಾರವಾಡದ ಪೇಡ ಬೆಣ್ಣೆದೋಸೆ , ರಸ್ತೆಯಲ್ಲಿ ಸಿಗುವ ಪಾನಿ ಪುರಿ ಮಸಾಲ ಪೂರಿ ಇವೆಲ್ಲ ಕರ್ನಾಟಕದ ವಿಶೇಷ ಮತ್ತು ಇವೆಲ್ಲ ಜನ್ಮ ಪಡೆದದ್ದು ಇಲ್ಲೇ.