ಸುದ್ದಿ

ಕರೀನಾಳ “ಸ್ನೇಕ್ ಚೈನ್ ‘’ ಬೆಲೆ ಕೇಳಿದರೆ ಅಚ್ಚರಿಯಂತು ಗ್ಯಾರಂಟಿ..!ಅಷ್ಟಕ್ಕೂ ಅದರ ಬೆಲೆ ಎಷ್ಟು ಗೊತ್ತ.?

By admin

September 27, 2019

ಬಾಲಿವುಡ್ ನಟಿ ಕರೀನಾ ಕಪೂರ್ ಹುಟ್ಟು ಹಬ್ಬದ ನಂತ್ರ ಡಾನ್ಸ್ ಇಂಡಿಯಾ ಡಾನ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್ ಫೈನಲ್ ನಲ್ಲಿ ಜಡ್ಜ್ ಆಗಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕರೀನಾ ಸ್ಟೈಲ್ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

ಸೆಟ್ ನಲ್ಲಿ ಕರೀನಾ ಫ್ಯಾಷನ್ ಎಲ್ಲರನ್ನು ಆಕರ್ಷಿಸಿದೆ. ವಿಶೇಷವಾಗಿ ಕರಿನಾ ಕತ್ತಿಗೆ ಹಾಕಿದ್ದ ಸ್ನೇಕ್ ಚೈನ್. ಕರೀನಾ ಡೈಮಂಡ್ ಸ್ನೇಕ್ ಚೈನ್ ಧರಿಸಿ ಬಂದಿದ್ದರು.

ಕರೀನಾರ ಈ ಚೈನ್ ಐಷಾರಾಮಿ ಕಾರುಗಳಿಗಿಂತ ದುಬಾರಿ ಎನ್ನಲಾಗಿದೆ. ಇದ್ರ ಬೆಲೆ 38 ಲಕ್ಷ ರೂಪಾಯಿಯಂತೆ. ಚೈನ್ ಅದ್ಭುತವಾಗಿದೆ. ಬಾಲಿವುಡ್ ಮಂದಿ ಕರೀನಾ ಚೈನ್ ಬಗ್ಗೆ ಮಾತನಾಡ್ತಿದ್ದಾರೆ.

ಡಾನ್ಸ್ ಇಂಡಿಯಾ ಡಾನ್ಸ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಹಾಗೂ ಕರೀನಾ ಫುಲ್ ಎಂಜಾಯ್ ಮಾಡಿದ್ದಾರೆ. ಪ್ರಿಯಾಂಕಾ, ʼದಿ ಸ್ಕೈ ಈಸ್ ಪಿಂಕ್ʼ ಚಿತ್ರದ ಪ್ರಚಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದರು.