ಚಳಿಗಾಲ ಬಂತೆಂದರೆ ಏನನ್ನಾದರೂ ತಿನ್ನುತ್ತಲೇ ಇರಬೇಕು ಎನಿಸದೇ ಇರದು. ಕಾಳು, ಹಣ್ಣುಗಳು, ತುಪ್ಪದಂತಹ ಪದಾರ್ಥಗಳು ದೇಹದ ಉಷ್ಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ, ಹಾಗಾಗಿ ಈ ಬಗೆ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ದೇಹದ ಉಷ್ಣತೆ ಕಾಪಾಡುವುದರ ಜತೆಗೆ ಕಾಯಿಲೆ ಬೀಳದಿರಲು ಇದೊಂದು ಒಳ್ಳೆಯ ಉಪಾಯವೂ ಹೌದು. ಶೇಂಗಾ ಮತ್ತು ದ್ವಿದಳ ಧಾನ್ಯಗಳು, ಬಾದಾಮಿ ಮತ್ತು ಗೋಡಂಬಿ ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ಉತ್ತಮ. ಅಲ್ಲದೆ ಇವು ದೇಹದೊಳಗಿನ ಕೊಲೆಸ್ಟ್ರಾಲ್ನ್ನು ಹೆಚ್ಚಿಸುವುದಿಲ್ಲ.
ಗೋಡಂಬಿ ಸೇವನೆಯಿಂದ ದೇಹದೊಳಗೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಯೆ? ಈ ಪ್ರಶ್ನೆಗೆ ಪ್ರಖ್ಯಾತ ಪೌಷ್ಟಿಕ ತಜ್ಞ ರುಜುತಾ ದಿವೆಕರ್, ಗೋಡಂಬಿ ಮೂಲತಃ ಭಾರತ ಮತ್ತು ಆಫ್ರಿಕಾದ ಬೆಳೆ. ಇದು ಬದಾಮಿಯಂತೆ ದೇಹಕ್ಕೆ ಒಳ್ಳೆಯದು. ಗೋಡಂಬಿಯಲ್ಲಿ ಕೊಲೆಸ್ಟ್ರಾಲ್ ಅಂಶಗಳಿಲ್ಲ. ಗೋಡಂಬಿ ಎಂಬುದು ಪೋಷಕಾಂಶಗಳ ತವರುಮನೆ. ಇದು ಸಕ್ಕರೆ ಕಾಯಿಲೆ ಇರುವವರ ಪಾದಗಳಿಗೆ ಒಳ್ಳೆಯದು. ಬೊಗಸೆ ತುಂಬ ಗೋಡಂಬಿಗಳನ್ನು ಪ್ರತಿನಿತ್ಯ ಸೇವಿಸುವದರಿಂದ ಕಾಲು ಸೆಳೆತ ಇನ್ನಿಲ್ಲವಾಗುತ್ತದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನವಾಗಿಡಬಹುದು ಎನ್ನುತ್ತಾರೆ.ಒಂದು ಮೋಸಂಬಿ ಹಣ್ಣಿಗಿಂತ ಗೋಡಂಬಿ 5 ಪಟ್ಟು ಹೆಚ್ಚು ವಿಟಮಿನ್ ಸಿ ಹೊಂದಿರುತ್ತದೆ. ದೇಹದಲ್ಲಿನ ಉಷ್ಣಾಂಶ ಹೆಚ್ಚಿಸಲು ವಿಟಮಿನ್ ಸಿ ಉಪಯೋಗಕಾರಿ .
ಗೋಡಂಬಿಯ ನಾಲ್ಕು ಪ್ರಯೋಜನಗಳು
ಸಹಾಯಕವಾದ ಫೈಬರ್‌ಗಳನ್ನು ಹೊಂದಿದೆಗೋಡಂಬಿ ಅಥವಾ ಕ್ಯಾಶೀವ್ ನಟ್‌ಗಳಲ್ಲಿ ಆಹಾರದ ಫೈಬರ್ ಅಂಶ ಹೊಂದಿದ್ದು, ಇದನ್ನು ನಮ್ಮ ದೇಹ ಉತ್ಪಾದನೆ ಮಾಡದ ಕಾರಣ ಅದನ್ನು ಹೊರಗಿನಿಂದ ಸೇವಿಸಬೇಕಾಗುತ್ತದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆ ಮಾಡುತ್ತದೆ.
ಹೃದಯ ರೋಗವನ್ನು ನಿಯಂತ್ರಣದಲ್ಲಿಡುತ್ತದೆಗೋಡಂಬಿ ಎಲ್‌ಡಿಎಲ್ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಎಚ್‌ಡಿಎಲ್ ಕೊಲೆಸ್ಟರಾಲ್ ಒಯ್ಯುವ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಬರುವ ಅಪಾಯವನ್ನು ತಗ್ಗಿಸುತ್ತದೆ. ಆದರೆ, ಉಪ್ಪು ಅಂಶ ಹೆಚ್ಚಿರುವ ಅಥವಾ ಹುರಿದ ಗೋಡಂಬಿಯಲ್ಲದಂತೆ ನೋಡಿಕೊಳ್ಳಿ.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇನ್ನು, ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆಅದರಿಂದ ಹೆಚ್ಚು ಕಾಲ ಹೊಟ್ಟೆ ತುಂಬುವಂತೆಯೂ ನೋಡಿಕೊಳ್ಳುತ್ತದೆ.
ಕಣ್ಣಿಗೆ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನುತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ, ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು, ಇದರಿಂದ ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.ನಿಮ್ಮ ಚರ್ಮಕ್ಕೆ ಒಳ್ಳೆಯದುಗೋಡಂಬಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಅಲ್ಲದೆ, ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿ ಆ್ಯಂಟಿಆಕ್ಸಿಡೆಂಟ್ಸ್ ಸಹ ಹೆಚ್ಚಿರುತ್ತದೆ.. ಅದರಿಂದ ನಿಮ್ಮ ಚರ್ಮಕ್ಕೆ ಒಳ್ಳೆಯದು. ಜತೆಗೆ, ಗೋಡಂಬಿ ತಿನ್ನುವುದಾಗಲೀ, ಗೋಡಂಬಿ ಎಣ್ಣೆಯನ್ನು ನೆತ್ತಿ ಮೇಲೆ ಹಚ್ಚಿಕೊಳ್ಳುವುದರಿಂದ ಚರ್ಮ ಹಾಗೂ ಕೂದಲಿಗೆ ಮೆಲಾನಿನ್ ಪಿಗ್ಮೆಂಟ್ ಉತ್ಪತ್ತಿಯಾಗಲು ನೆರವಾಗುತ್ತದೆ. ಇನ್ನೊಂದೆಡೆ, ಕೂದಲಿಗೆ ನಯವಾದ ವಿನ್ಯಾಸವನ್ನೂ ಇದು ನೀಡುತ್ತದೆ.