ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಯವರು ಇಂದು ತನ್ನ ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೃಷ್ಣ ಲೀಲಾ ಸಿನಿಮಾ ಮೂಲಕ ಖ್ಯಾತ ಹೊಂದಿದ್ದ ನಟಿ ಮಯೂರಿ ಅವರು ಇಂದು ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುದಿನದ ಗೆಳೆಯ ಅರುಣ್ ಅವರ ಜೊತೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇಂದು ಮದುವೆಯಾಗಿದ್ದಾರೆ. ಅರುಣ್ ಮತ್ತು ಮಯೂರಿ ಸುಮಾರು 10 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇಂದು ಕುಟುಂಬ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದಾರೆ.
ತನ್ನ ಮದುವೆ ವಿಚಾರವಾಗಿ ಮಯೂರಿ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ನಾನು ಮದುವೆಯಾದೆ ಎಂದು ಬರೆದು ಅವರ ಮದುವೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮೊದಲು ಕಿರುತರೆಯಲ್ಲಿ ನಟನೆಗೆ ಎಂಟ್ರಿ ಕೊಟ್ಟಿದ್ದ ಮಯೂರಿ ಅವರು ನಂತರ ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಮನ ಗೆದ್ದಿದ್ದರು. ನಂತರ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ನಟ ಅಜಯ್ ರಾವ್ ಅವರ ಜೊತೆ ಅಭಿನಯಿಸಿ ಖ್ಯಾತಿಯನ್ನ ಪಡೆದಿದ್ದರು.
ಮಯೂರಿ ಮದುವೆಯಾಗಿರುವ ಅರುಣ್ ಅವರು ಐಟಿ ಉದ್ಯೋಗಿಯಾಗಿದ್ದು ಅಮೇರಿಕಾದಲ್ಲಿ ಸೆಟಲ್ ಆಗಿದ್ದರು, ಈಗ ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ, ಬಾಲ್ಯದಿಂದ ಗೆಳೆಯರಾಗಿದ್ದ ಮಯೂರಿ ಹಾಗೂ ಅರುಣ್ ಅವರು ದೀರ್ಘಕಾಲ 10 ವರ್ಷಗಳಿಂದ ಪ್ರೀತಿಯ ಬಲೆಯಲ್ಲಿದ್ದರು. ಈಗ ತಮ್ಮ ಮನೆಯವರ ಬಳಿ ತಮ್ಮ ಪ್ರೀತಿಯ ಬಗ್ಗೆ ಒಪ್ಪಿಸಿ ಮದುವೆಯಾಗಿದ್ದಾರೆ.