ನಟ ಚಿರಂಜೀವಿ ಸರ್ಜಾ ಅವರು ದು ಎಲ್ಲರನ್ನು ಅಗಲಿದ್ದಾರೆ. ಯಾವಾಗಲೂ ನಗುತ್ತಲೇ ಇರುತ್ತಿದ್ದ ನಟ ಚಿರಂಜೀವಿ ಅವರು ಇಂದು ಇನ್ನಿಲ್ಲ ಎಂಬ ಸುದ್ದಿ ಕೇಳಿ ಕರ್ನಾಟಕದ ಜನತೆಗೆ ನಿಜಕ್ಕೂ ಶಾಕ್ ಆಗಿದೆ. ಎರಡು ವರ್ಷಗಳ ಹಿಂದೆ ಚಿರಂಜೀವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿರಂಜೀವಿ ಅವರು ನಿಧನರಾಗಿದ್ದಾರೆ. 2018ರಂದು ಅವರು ನಟಿ ಮೇಘನಾ ರಾಜ್ ಜೊತೆ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಮೂಲಕ ಮದುವೆಯಾಗಿದ್ದರು. ಇವರಿಬ್ಬರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. 10 ವರ್ಷಗಳಿಂದ ಇವರು ಪ್ರೀತಿ ಮಾಡುತ್ತಿದ್ದರು. ಇವೆರಡೂ ಕುಟುಂಬದವರು ಒಳ್ಳೆಯ ಆತ್ಮೀಯತೆ ಹೊಂದಿದ್ದರಿಂದ ಮನೆಯವರೆಲ್ಲ ಒಪ್ಪಿಗೆಯೊಂದಿಗೆ ಈ ಜೋಡಿ ಸಂಭ್ರಮದಿಂದ ಹಸೆಮಣೆ ಏರಿತ್ತು.
ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮಗಳು ಮೇಘನಾ ರಾಜ್. ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ. ಚಿರು, ಮೇಘನಾ ಪ್ರೀತಿಗೆ ಮತ್ತು ಮದುವೆಗೆ ಚಿರು ಮಾವ ಅರ್ಜುನ್ ಸರ್ಜಾ ಅವರೇ ಮುನ್ನುಡಿ ಹಾಡಿದ್ದಂತೆ.
ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರು ಇಂದು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಬಂದು ಚಿರಂಜೀವಿ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ತಾರಾ ಅವರು ಚಿರಂಜೀವಿ ಬಗ್ಗೆ ಮಾತನಾಡಿದ್ದು, ಶೀಘ್ರದಲ್ಲೇ ಪುಟ್ಟ ಚಿರಂಜೀವಿ ಬರ್ತಿದ್ದಾನೆ ಎಂದಿದ್ದಾರೆ