ಭಾರತ ಸ್ವತಂತ್ರ ಪಡೆದ ನಂತರ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಎಂಎನ್ಎಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಬಾಬ್ರಿ ಮಸೀದ್ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನು. ಅಲ್ಲದೆ ಒಳ್ಳೆಯ ಹೃದಯವಿರುವ ಮುಸಲ್ಮಾನರು ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡಲ್ಲ. ಈ ಬಗ್ಗೆ ಅವರು ಅವರ ಶ್ರೇಷ್ಠ ಗ್ರಂಥವನ್ನು ಮುಟ್ಟಿ ಹೇಳುತ್ತಾರೆ.
ನಾನು ಮಹಾತ್ಮ ಗಾಂಧಿಯ ಅತ್ಯುತ್ತಮ ಮೊಮ್ಮಗ. ಹೀಗಾಗಿ ನಾನು ಗಾಂಧಿಯ ಹತ್ಯೆಗೆ ನ್ಯಾಯ ಕೇಳುತ್ತಿದ್ದೇನೆ. ನನ್ನ ಹೃದಯವನ್ನು ಮುಟ್ಟಿ ಹೇಳುತ್ತೇನೆ ನಾನು ನಿಜವಾದ ಭಾರತೀಯ.
ನಿಜವಾದ ಭಾರತೀಯನಿಗೆ ದೇಶದಲ್ಲಿ ಎಲ್ಲರೂ ಶಾಂತಿ ಮತ್ತು ಸಮಾನರಾಗಿರಬೇಕು ಎಂದು ಬಯಸುತ್ತಾನೆ. ಅಲ್ಲದೆ ರಾಷ್ಟ್ರೀಯ ಧ್ವಜದ ತ್ರಿವರ್ಣ ಬಣ್ಣವನ್ನು ಯಾವಾಗಲೂ ಒಂದೇ ರೀತಿ ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ನಟ ಕಮಲ್‍ಹಾಸನ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಪುಲ್ವಾಮದಲ್ಲಿ ನಡೆದ ದಾಳಿಯ ಬಗ್ಗೆಯೂ ಅವರು ವಿವಾಧಾತ್ಮಕ ಹೇಳಿಕೆ ನೀಡಿದ್ದರು.