ಜ್ಯೋತಿಷ್ಯ

ಗಂಡನನ್ನು ಹೆಚ್ಚಾಗಿ ಪ್ರೀತಿಸುವ ವಿಚಾರದಲ್ಲಿ ಈ ರಾಶಿಗಳ ಹುಡುಗಿಯರು ತುಂಬಾ ಮುಂದು…ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

By admin

February 07, 2019

ಪ್ರತಿಯೊಬ್ಬರ ನಡವಳಿಕೆಯನ್ನು ಅವ್ರ ರಾಶಿ ಆಧಾರದ ಮೇಲೆ ಹೇಳಬಹುದು. ವ್ಯಕ್ತಿ ವರ್ತನೆಗೂ ರಾಶಿಗೂ ಸಂಬಂಧವಿದೆ. ಯಾವ ವ್ಯಕ್ತಿ ಕೋಪಿಷ್ಟ? ಯಾವ ವ್ಯಕ್ತಿ ಅದೃಷ್ಟವಂತ ಎಂಬುದನ್ನು ರಾಶಿ ನೋಡಿಯೇ ಪಂಡಿತರು ಹೇಳ್ತಾರೆ.

ರಾಶಿ ಹಾಗೂ ಪ್ರಣಯಕ್ಕೂ ಸಂಬಂಧವಿದೆ. ಯಾವ ಹುಡುಗಿಯರು ಮದುವೆಯಾದ್ಮೇಲೆ ಸಂಗಾತಿಯನ್ನು ಅತಿ ಹೆಚ್ಚು ತೃಪ್ತಿಪಡಿಸ್ತಾರೆ? ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾರೆ ಎಂಬುದನ್ನು ರಾಶಿ ಮೂಲಕವೇ ಹೇಳಬಹುದು.

ಮಕರ ರಾಶಿಯ ಹುಡುಗಿಯರು ಪ್ರೀತಿ ವಿಚಾರದಲ್ಲಿ ಎಂದೂ ಮೋಸ ಮಾಡುವುದಿಲ್ಲವಂತೆ. ಪತಿಯನ್ನು ನಿಷ್ಠೆಯಿಂದ ಪ್ರೀತಿ ಮಾಡುತ್ತಾರಂತೆ. ಮದುವೆಯಾದ್ಮೇಲೆ ಎಂದೂ ಪತಿಯ ದುಃಖಕ್ಕೆ ಕಾರಣವಾಗುವುದಿಲ್ಲವಂತೆ. ಸಂಭೋಗದ ಪೂರ್ಣ ಸುಖವನ್ನು ಸಂಗಾತಿಗೆ ನೀಡುತ್ತಾರಂತೆ.

ಸಿಂಹ ರಾಶಿಯ ಹುಡುಗಿಯರು ಪತಿಯ ಭಾವನೆಗಳನ್ನು ಗೌರವಿಸುತ್ತಾರಂತೆ. ಪತಿಯ ಭಾವನೆಗೆ ಸ್ಪಂದಿಸುತ್ತಾರಂತೆ. ಕುಟುಂಬದ ಸಂತೋಷಕ್ಕೆ ಹೆಚ್ಚು ಗಮನ ನೀಡುವ ಜೊತೆಗೆ ರಾತ್ರಿ ಪತಿಯನ್ನು ಬೇಸರಗೊಳಿಸುವುದಿಲ್ಲವಂತೆ.

ವೃಶ್ಚಿಕ ರಾಶಿ ಹುಡುಗಿಯರು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರಿತಿರುತ್ತಾರಂತೆ. ಪತಿಯನ್ನು ಅವ್ರು ಹೆಚ್ಚು ಅರ್ಥ ಮಾಡಿಕೊಳ್ತಾರೆ. ದೈಹಿಕ ಸಂಬಂಧದಿಂದ ಹಿಡಿದು ಪ್ರತಿಯೊಂದು ವಿಷ್ಯಕ್ಕೂ ಹೆಚ್ಚು ಮಹತ್ವ ನೀಡ್ತಾರೆ.