ಹೊಸ ವರ್ಷ ಹೊಸದಾಗಿರಲಿ ಎಂಬುದು ಪ್ರತಿಯೊಬ್ಬರ ಆಸೆ. ಜ್ಯೋತಿಷ್ಯ ಶಾಸ್ತ್ರ ಕೂಡ ಈ ವರ್ಷ ಯಾವ ರಾಶಿಯವರಿಗೆ ರಾಜಯೋಗ ಎಂಬುದನ್ನು ಹೇಳಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2019 ಕುಂಭ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆಯಂತೆ. ಕುಂಭ ರಾಶಿಯವರ ಪ್ರತಿಯೊಂದು ಸಮಸ್ಯೆ ದೂರವಾಗಿ ಯಶಸ್ಸು ಅರಸಿ ಬರಲಿದೆಯಂತೆ. ಸಂತೋಷ ಎಲ್ಲೆಲ್ಲೂ ಮನೆ ಮಾಡಿರಲಿದೆಯಂತೆ. 2019 ಕುಂಭ ರಾಶಿಯವರಿಗೆ ಸರಳ ಹಾಗೂ ಸುಲಭವಾಗಿರಲಿದೆಯಂತೆ.
ಮಂಗಳಕರ ಘಟನೆಗಳು ನಡೆಯಲಿದ್ದು, ಉದ್ಯೋಗ, ಬಡ್ತಿ ಪ್ರಾಪ್ತಿಯಾಗಲಿದೆಯಂತೆ. ಕಂಕಣ ಬಲ ಕೂಡಿ ಬರಲಿದೆಯಂತೆ. ಮಾನ, ಸನ್ಮಾನ, ಪ್ರತಿಷ್ಠೆಯಲ್ಲಿ ವೃದ್ಧಿಯಾಗಲಿದೆಯಂತೆ.
ಆರ್ಥಿಕ ವಿಷ್ಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯವರ ಜೊತೆ ಚರ್ಚೆ ನಡೆಸುವುದು ಒಳ್ಳೆಯದು. ಇಲ್ಲವಾದ್ರೆ ಸಂಕಷ್ಟ ಎದುರಿಸಬೇಕಾಗುತ್ತದೆ.