ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಟಿಆರ್ ಪಿಯಲ್ಲಿ ನಂ 1 ಸ್ಥಾನದಲ್ಲಿದೆ. ಇದೇಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿಂದ ಕಿರುತೆರೆಗೆ ಬಂದಿರುವ ಅನಿರುದ್ಧ್ ಗೆ ಈ ಧಾರಾವಾಹಿ ಹೊಸ ಇನ್ನಿಂಗ್ಸ್ ನೀಡಿದೆ. ಅವರಿಗೆ ಹೆಸರನ್ನು ತಂದು ಕೊಟ್ಟಿದೆ. ನವಿರಾದ ಪ್ರೇಮ ಕಥೆ, ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯುವಸಾಂಸಾರಿಕ ತಾಪತ್ರಯಗಳು, ಹೊಸ ರೀತಿಯ ನಿರೂಪಣೆ, ಕತೆ ಇವೆಲ್ಲವೂ.
ಹೊಸ ಕಥೆಯೊಂದಿಗೆ ಜನರ ಮನಸ್ಸು ಗೆದ್ದಿರುವ ಜೊತೆ ಜೊತೆಯಲಿ ಧಾರಾವಾಹಿ ನಿಜವಾಗಿ ಸ್ವಮೇಕ್ ಕಥೆ ಅಲ್ಲ ಎನ್ನಲಾಗುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿ ಮರಾಠಿ ಮೂಲದ ಕಥೆಯಾಗಿದೆ.“ತುಲ ಪಹತೆ ರೆ” ಅನ್ನೋ ಮರಾಠಿ ಮೂಲದ ಧಾರಾವಾಹಿಯ ಕಥೆಯನ್ನೇ ಕನ್ನಡದ ಅವತರಣಿಕೆಯಾಗಿ ಮಾಡಲಾಗಿದೆ.
ಮರಾಠಿ ಜನರ ಮನಗೆದ್ದಿರುವ“ತುಲ ಪಹತೆ ರೆ” ಧಾರಾವಾಹಿ ಈಗಾಗಲೇ 300ಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಮುಗಿಸಿದೆ.ಆದರೆ ಕನ್ನಡದಲ್ಲಿ ಪ್ರಾರಂಭವಾಗಿ ಈಗ ತಾನೇ ಮೂರು ವಾರಗಳಾಗಿವೆ. ಎರಡು ದಶಕಗಳ ಅಂತರವಿರುವ ಪ್ರೇಮಿಗಳು ಹೇಗೆ ಒಂದಾಗಿರಬಹುದು ಅನ್ನೋದುಸ್ಟೋರಿ.
ಮೂಲತಃ ಮರಾಠಿ ಕಥೆಯಾದರೂ, ಕನ್ನಡದ ನೆಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆಕೂಡ ಬದಲಾಗಿದೆ. ಒಟ್ಟಿನಲ್ಲಿ ರಿಮೇಕ್ ಕಥೆಯಾದರೂ ಕನ್ನಡಿಗರ ಮನಸ್ಸು ಗೆದ್ದಿರುವ ಜೊತೆ ಜೊತೆಯಲಿಕಥೆಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ.