ಆಟೋಮೊಬೈಲ್ಸ್

ಭಾರತದಲ್ಲಿ ಲಾಂಚ್ ಆಗಲಿದೆ ಆಸೂಸ್ ‘ಝೆನ್‌ಫೋನ್ 6’!..ಟು ಇನ್‌ ಒನ್‌ ಕ್ಯಾಮೆರಾ!

By admin

June 11, 2019

ಟೆಕ್‌ ವಲಯದಲ್ಲಿ ಭಾರೀ ಹೆಸರು ಮಾಡಿರುವ ‘ಆಸೂಸ್’ ಕಂಪನಿಯು ಇತ್ತೀಚಿಗೆ ವಿಶ್ವ ಮೊಬೈಲ್‌ ಮಾರುಕಟ್ಟೆಗೆ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸಖತ್ ಸುದ್ದಿ ಮಾಡಿತ್ತು. ವಿಶೇಷ ಫ್ಲಿಪ್‌ ಸೆಲ್ಫಿ ಕ್ಯಾಮೆರಾ ಫೀಚರ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಈಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಲು ಮುಂದಾಗಿದ್ದು, ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅದರ ಹೆಸರು ಬದಲಾಗಲಿದೆ. ಅದಕ್ಕಾಗಿ ಬಿಡುಗಡೆಯ ದಿನಾಂಕವನ್ನು ಫಿಕ್ಸ್‌ ಮಾಡಿಕೊಂಡಿದೆ

ಹೌದು, ಆಸೂಸ್‌ ಕಂಪನಿಯು ತನ್ನ ಹೊಸ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್‌ ಅನ್ನು ಇದೇ ಜೂನ್ 11 ರಂದು ರಿಲೀಸ್‌ ಮಾಡಲು ಮೂಹೂರ್ತ್ ನಿಗದಿ ಮಾಡಿಕೊಂಡಿದ್ದು, ಆದರೆ ಕಂಪನಿಯು ಈ ಫೋನನ್ನು ‘ಆಸೂಸ್‌ 6z’ ಹೆಸರಿನಿಂದ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮೇನ್‌ ಅಟ್ರ್ಯಾಕ್ಷನ್‌ ಫ್ಲಿಪ್‌ ಕ್ಯಾಮೆರಾ ಆಗಿದ್ದು, ಇದರೊಂದಿಗೆ ಹೈ ಎಂಡ್‌ . ಹೆಚ್‌ಡಿ ಡಿಸ್‌ಪ್ಲೇ ಆಸೂಸ್‌ ಝೆನ್‌ಫೋನ್ 6 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್‌ LCD ಮಾದರಿಯಲ್ಲಿದೆ. ಡಿಸ್‌ಪ್ಲೇಯ ಸುತ್ತಲೂ ನಾಚ್‌ ಇಲ್ಲದ, ಅತೀ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗಾಯೇ ಡಿಸ್‌ಪ್ಲೇ ಸುತ್ತಲಿನ ನಾಲ್ಕು ಮೂಲೆಗಳು ಕರ್ವ್ ಮಾದರಿಯ ಆಕಾರದಲ್ಲಿದ್ದು, ಸ್ಮಾರ್ಟ್‌ಫೋನ್‌ ಅಂದವನ್ನು ಹೆಚ್ಚಿಸಿದೆ.

ಬಲವಾದ ಪ್ರೊಸೆಸರ್ ಆಸೂಸ್‌ನ ಈ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಹೊಂದಿದ್ದು, ಈ ಫೋನ್ ಎರಡು RAM ಆಯ್ಕೆಗಳನ್ನು ಹೊಂದಿದೆ. ಅವು ಕ್ರಮವಾಗಿ 6GB RAM ಮತ್ತು 8GB RAM ಸಾಮರ್ಥ್ಯದಲ್ಲಿವೆ. ಹಾಗೆಯೇ ಆಂತರಿಕ ಸಂಗ್ರಹಕ್ಕಾಗಿ 64GB, 128GB ಮತ್ತು 256GB ಸ್ಥಳಾವಕಾಶದ ಮೂರು ಆಯ್ಕೆಗಳನ್ನು ಒದಗಿಸಲಾಗಿದೆ.

ಕ್ಯಾಮೆರಾ ವಿಶೇಷತೆ ಝೆನ್‌ಫೋನ್‌ 6 ಸ್ಮಾರ್ಟ್‌ಫೋನಿನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾ ಆಯ್ಕೆಯು ಫ್ಲಿಪ್ ಮಾದರಿಯಲ್ಲಿದೆ. ಪ್ರಮುಖ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ನೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ವೈಲ್ಡ್‌ ಆಂಗಲ್ ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಸೆಲ್ಫಿಗೂ ಈ ಕ್ಯಾಮೆರಾವೇ ಬಳಕೆಯಾಗಲಿದೆ. ಹೇವಿ ಬ್ಯಾಟರಿ ಲೈಫ್ ಆಸೂಸ್‌ ಝೆನ್‌ಫೋನ್ 6 ಸ್ಮಾರ್ಟ್‌ಫೋನಿಗೆ 5000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ಶಕ್ತಿಯನ್ನು ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗೆ ಬೆಂಬಲ ನೀಡಲಿದೆ. ಇದರೊಂದಿಗೆ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಸಹ ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜಿಂಗ್ ಪಡೆದುಕೊಳ್ಳಲಿದೆ. ಬೆಲೆ ಮತ್ತು ಲಭ್ಯತೆ ಆಸೂಸ್‌ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್ ಇದೇ ಜೂನ್ 11ರಂದು ಭಾರತಕ್ಕೆ ಎಂಟ್ರಿ ಆಗಲಿದ್ದು, ಮೂರು ವೇರಿಯಂಟ್ ಮಾದರಿಗಳಲ್ಲಿ ಲಭ್ಯ ಇರಲಿದೆ. 6GB RAM ಮತ್ತು 64GB ವೇರಿಯಂಟ್ ಬೆಲೆಯು 39,000ರೂ.ಗಳ, 6GB RAM ಮತ್ತು 128GB ವೇರಿಯಂಟ್ ಬೆಲೆಯು 44,000ರೂ.ಗಳು ಮತ್ತು 8GB RAM ಮತ್ತು 256GB ವೇರಿಯಂಟ್ ಬೆಲೆಯು 47,000ರೂ.ಗಳು ಎಂದು ಊಹಿಸಲಾಗಿದೆ.