ವಿಶ್ವದ ಅತೀದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಲಂಕರಿಸಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಈ ಬಾರಿ 105.7 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ಅಮೇಜಾನ್ ಷೇರು ಬೆಲೆ ಶೇ. 9 ಕುಸಿದು 1624 ಡಾಲರ್ಗೆ ಅಂತ್ಯಗೊಂಡಿದೆ. ಹಾಗೆಯೇ ಬಿಲ್ ಗೇಟ್ಸ್ ಆಸ್ತಿ ಮೌಲ್ಯ 8800 ಕೋಟಿ ರೂ. ಆಗಿದ್ದು, ಬೆಜೋಸ್ರನ್ನು ಹಿಂದಿಕ್ಕಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ಜೆಫ್ ಮತ್ತು ತನ್ನ ಹೆಂಡತಿ ಮೆಕೆಂಜಿ ಬೆಜೋಸ್ ದಾಪಂತ್ಯದಲ್ಲಿ ಬಿರುಕು ಮೂಡಿತ್ತು. ಈ ಬಗ್ಗೆ ಖುದ್ದು ಸ್ವತಃ ಜೆಫ್ ಮತ್ತು ಅವರ ಮಾಜಿ ಪತ್ನಿಯೇ ಜಂಟಿಯಾಗಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಡಿವೋರ್ಸ್ ಪಡೆದುಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಅಲ್ಲದೇ ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಮಾಹಿತಿ ಇರಲಿ. ನಾನು ಜೆಫ್ ಕಳೆದ 25 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದೇವೆ. ಈಗ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಗೆಳೆಯರಾಗಿರಲು ನಿರ್ಧರಿಸಿದ್ದೇವೆ. ಇಷ್ಟು ದಿನ ದಂಪತಿಗಳಾಗಿ ನಾವಿಬ್ಬರೂ ವೈವಾಹಿಕ ಜೀವನ ಸಂತೋಷದಿಂದ ಕಳೆದಿದ್ದೇವೆ ಎಂದು ತಿಳಿಸಿದ್ದರು ಮೆಕೆಂಜಿ ಬೆಜೋಸ್.
2018ರಲ್ಲಿ ಅಮೇಜಾನ್ ಕಂಪನಿಯ ಸಂಸ್ಥಾಪಕ ಜೆಫ್, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದರು. ಜೆಫ್ ಒಟ್ಟು 137 ಬಿಲಿಯನ್ ಡಾಲರ್ (9,67,289 ಕೋಟಿ ರೂ.) ಮೌಲ್ಯದ ಸಂಪತ್ತು ಹೊಂದಿದ್ದರು. ಆರಂಭದಲ್ಲಿ ಅಮೇಜಾನ್ ಕಂಪನಿಯಲ್ಲಿಯೇ ಮೆಕೆಂಜಿ ಬೆಜೋಸ್ ಉದ್ಯೋಗಿಯಾಗಿದ್ದರು. ನಂತರ 2014ರಲ್ಲಿ ಬೈಸ್ಟಾಂಡರ್ ರಿವೊಲ್ಯೂಶನ್ ಎಂಬ ಸಂಸ್ಥೆ ಆರಂಭಿಸಿ ಶ್ರಮಿಸಿತ್ತು ಈ ದಂಪತಿ. ಜೆಫ್ ಈಗಾಗಲೇ ತಮ್ಮ ಪತ್ನಿ ಮೆಕೆಂಜಿ ಬೆಜೋಸ್ ಗೆ ವಿಚ್ಛೇದನ ನೀಡಿದ್ದಾರೆ. ಹಾಗೆಯೇ ಪತ್ನಿಗೆ ಜೆಫ್ ಅವರು ನೀಡಿರುವ ಜೀವನಾಂಶ ಬರೋಬ್ಬರಿ 69 ಶತಕೋಟಿ ಡಾಲರ್. ಜೆಫ್ ಅವರು ತಮ್ಮ ಸ್ನೇಹಿತರ ಪತ್ನಿ ಜತೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ಮೆಕೆಂಜಿ ಜೆಫ್ಗೆ ವಿಚ್ಛೇದನ ನೀಡಲಾಗಿದೆ ಎನ್ನಲಾಗುತ್ತಿದೆ.