ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ ಕೆಲಸಕ್ಕೆ ಸೇರಿದ ಸ್ಟಿವನ್ ಪ್ರತಿದಿನ ಓಕ್ ಮರದ ಬುಡದಲ್ಲಿ ಇರುವ ಕಳೆಗಳನ್ನ ಅಗೆದು ಅದನ್ನ ಕ್ಲೀನ್ ಮಾಡುತ್ತಿದ್ದ.
ಇನ್ನು ದಿನಾಲೂ ಕೆಲಸ ಮಾಡುವಂತೆ ಆ ದಿನ ಕೂಡ ತೋಟಕ್ಕೆ ಓಕ್ ಮರದ ಬುಡವನ್ನ ಕ್ಲೀನ್ ಮಾಡುತ್ತಿರುವಾಗ ಚಿಕ್ಕ ಚಿಕ್ಕ ಕಪ್ಪು ಗಡ್ಡೆಗಳು ಸ್ಟಿವನ್ ಕೈಗೆ ಸಿಕ್ಕವು. ಇನ್ನು ಅದೂ ಮಣ್ಣಿನ ಗಡ್ಡೆಗಳು ಎಂದು ಭಾವಿಸಿದ ಸ್ಟಿವನ್ ತನ್ನ ಕೆಲಸವನ್ನ ಮುಂದುವರೆಸಿದ, ಆದರೆ ಮತ್ತೆ ಆತನಿಗೆ ಅಂತಹುದ್ದೇ ಗಡ್ಡೆಗಳು ಸಿಕ್ಕವು. ಇನ್ನು ಅದನ್ನ ಕೈಗೆ ತೆಗೆದುಕೊಂಡ ಸ್ಟಿವನ್ ಅದನ್ನ ಸರಿಯಾಗಿ ಕ್ಲೀನ್ ಮಾಡಿ ನೋಡಿದಾಗ ಅದೂ ಬ್ಲಾಕ್ ಗೋಲ್ಡ್ ಎಂದು ಅವನಿಗೆ ತಿಳಿಯಿತು, ಹೌದು ನಮ್ಮ ನಮ್ಮ ಭಾಷೆಯಲ್ಲಿ ಇದನ್ನ ಕಪ್ಪು ಅಣಬೆ ಎಂದು ಕರೆಯುತ್ತಾರೆ. ಯೂರೋಪ್ ನಲ್ಲಿ ತುಂಬಾ ಅಪರೂಪಕ್ಕೆ ಈ ಕಪ್ಪು ಅಣಬೆ ಸಿಗುತ್ತದೆ, ಅತೀ ಹೆಚ್ಚು ಪೋಷಕಾಂಶ ಹೊಂದಿರುವ ಈ ಅಣಬೆಯನ್ನ ಬ್ಲಾಕ್ ಎಂದು ಕರೆಯುತ್ತಾರೆ.
ಹೌದು ಇದಕ್ಕೆ ಬ್ಲಾಕ್ ಗೋಲ್ಡ್ ಎಂದು ಕರೆಯಲು ಕಾರಣ ಅದರ ಬೆಲೆ, ಐಷಾರಾಮಿ ವಸ್ತುಗಳ ಬಳಕೆಯಲ್ಲಿ ಈ ಅಣಬೆಯನ್ನ ಬಳಸುವುದರಿಂದ ಒಂದು ಕೆಜಿ ಕಪ್ಪು ಅಣಬೆಯ ಬೆಲೆ 1.5 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಯ ವರೆಗೆ ಇರುತ್ತದೆ. ಇನ್ನು ಸ್ಟಿವನ್ ಗೆ ಸುಮಾರು 50 ಕೆಜಿ ಬ್ಲಾಕ್ ಓಲ್ಡ್ ಸಿಕ್ಕಿದೆ ಮತ್ತು ಇದರಿಂದ ಈತನಿಗೆ ಸುಮಾರು ಒಂದು ಕೋಟಿಗೂ ಹೆಚ್ಚು ಹಣ ಸಿಕ್ಕಿದೆ, ಇನ್ನು ಇದರಿಂದ ಶ್ರೀಮಂತನಾದ ಸ್ಟಿವನ್ ಆ ಓಕ್ ತೋಟವನ್ನ ಖರೀದಿ ಮಾಡಿ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಆನಂದನ ಜೀವನವನ್ನ ನಡೆಸುತ್ತೇನೆ ಎಂದು ಹೇಳಿದ್ದಾರೆ.