‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ.
5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು ಆಟ ಆಡಿದ್ದರು.ಒಟ್ಟಾರೆಯಾಗಿ ಈ ವಾರ11 ಮಂದಿ ಎಲಿಮಿನೇಶನ್‌ಗೆ ನಾಮಿನೇಟ್ಆಗಿದ್ದರು. ಅವರಲ್ಲಿ ಜೈಜಗದೀಶ್ 5ನೇವಾರಕ್ಕೆ ಬಿಗ್ ಮನೆಯ ತಮ್ಮ ಪಯಣ ಮುಗಿಸುತ್ತಿದ್ದಾರೆ ಎನ್ನಲಾಗಿದೆ.ಆದರೆ ಅದು ಅಧಿಕೃತವಾಗಿ ಪ್ರಸಾರವಾಗಿಲ್ಲ.
ಕಣ್ಣೀರುತರಿಸಿತ್ತು ಜೈ ಜಗದೀಶ್ಅವರು ಹೇಳಿದ ಕಥೆ: ಜೈಜಗದೀಶ್ಬಿಗ್ಬಾಸ್ಮನೆಯಲ್ಲಿ ಆಗಾಗ ಕೆಟ್ಟ ಪದ ಬಳಸುತ್ತಾರೆ ಎಂಬ ಆರೋಪ ಅವರ ಮೇಲಿತ್ತು.ಮೊದಲನೇ ಮದುವೆ,ಮತ್ತು ಮಗಳು ಅರ್ಪಿತಾ ಬಗ್ಗೆ ಜೈಜಗದೀಶ್ ಹೆಳಿದಕಥೆ ಎಲ್ಲರ ಕಣ್ಣಾಲಿಯಲ್ಲೂ ನೀರುತರಿಸಿತ್ತು.
ಯಾರಿಗೆಎಷ್ಟು ಪರ್ಸಂಟೇಜ್ ಮತಬಂತು? : ಚೈತ್ರಾ ಕೋಟೂರ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ಹಲವರಿಗೆ ಶಾಕ್ ಉಂಟುಮಾಡಿತ್ತು. ಈಗ ಜೈಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ಕೂಡ ಅಚ್ಚರಿ ಉಂಟುಮಾಡಿದೆ. ಚಂದನಾ, ಹರೀಶ್ರಾಜ, ಜೈಜಗದೀಶ್, ಕಿಷನ್,ಕುರಿಪ್ರತಾಪ್, ಪೃಥ್ವಿ,ಭೂಮಿಶೆಟ್ಟಿ, ಚಂದನ್ಆಚಾರ್, ರಾಜುತಾಳಿಕೋಟೆ,ಶೈನ್ಶೆಟ್ಟಿ,ಸುಜಾತಾ ಈ ಸಲಮನೆಯಿಂದ ಹೊರಹೋಗಲು ನಾಮಿನೇಟ್ಆಗಿದ್ದರು.ಅವರಲ್ಲಿ ಶೈನ್ಶೆಟ್ಟಿಗೆ ಅತಿಹೆಚ್ಚು ಮತ ಬಂದಿತ್ತು.ಮೊದಲ ಬಾರಿಗೆ ಯಾರು ಯಾರಿಗೆ ಎಷ್ಟು ಪರ್ಸಂಟೇಜ್ ಮತ ಬಂದಿದೆ ಎಂಬುದನ್ನು ಸುದೀಪ್’ವಾರದ ಕಥೆ ಕಿಚ್ಚನ ಜೊತೆ’ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.ಚಂದನಾ ಎರಡನೇ ಅತಿ ಹೆಚ್ಚು ಮತಗಳಿಸಿದ್ದಾರೆ,ಮೂರನೇ ಸ್ಥಾನದಲ್ಲಿ ಕುರಿಪ್ರತಾಪ್ಇದ್ದಾರೆ.