Health

ಊಟದ ನಂತರ ಒಂದು ತುಂಡು ಬೆಲ್ಲ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭ ಗೊತ್ತ? ತಿಳಿದರೆ ತಪ್ಪದೆ ಬೆಲ್ಲ ಉಪಯೋಗಿಸುತ್ತೀರಾ..!

By admin

November 26, 2019

ಸಕ್ಕರೆಯ ಬದಲು ಸಿಹಿಯಾದ ಬೆಲ್ಲವನ್ನು ಬಳಸುವುದರಿಂದ ಅದೆಷ್ಟು ಆರೋಗ್ಯಕರ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ತಿಳಿದುಕೊಳ್ಳೋಣ. ನಮ್ಮ ಪೂರ್ವಿಕರು ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಸಕ್ಕರೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಾ ಇರಲಿಲ್ಲ ಅವರುಗಳು ಕಾಫಿ ಯನ್ನಾಗಲಿ ಯಾವುದೇ ಸಿಹಿ ಪದಾರ್ಥಗಳನ್ನು ತಯಾರಿಸುವುದಕ್ಕೆ ಬೆಲ್ಲವನ್ನು ಬಳಸುತ್ತಿದ್ದರು ಯಾಕೆ ಎಂದರೆ ಬೆಲ್ಲದಲ್ಲಿ ಇರುವಂತಹ ಅಂಶಗಳು ಒಳ್ಳೆಯ ಪೋಷಕಾಂಶ ಕೊಡುವುದರ ಜೊತೆಗೆ ಆರೋಗ್ಯಕರವಾಗಿಯೂ ಕೂಡ ಇರುತ್ತದೆ ಆದ್ದರಿಂದ ಬೆಲ್ಲವನ್ನು ಉಪಯೋಗಿಸುವುದು ತುಂಬಾನೇ ಉತ್ತಮಕಾರಿ .

ಊಟವಾದ ಬಳಿಕ ಒಂದು ತುಂಡು ಬೆಲ್ಲವನ್ನು ತಿನ್ನುವುದರಿಂದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಇದರಿಂದ ಊಟವೂ ಕೂಡ ಚೆನ್ನಾಗಿ ಜೀರ್ಣವಾಗುತ್ತದೆ ಜೀರ್ಣಶಕ್ತಿ ಹೆಚ್ಚಿಸುತ್ತದೆ .ಒಂದು ಗ್ಲಾಸ್ ಬೆಲ್ಲದ ಪಾನಕ ಜೊತೆ ಬಂದ ಎರಡು ತುಳಸಿ ಎಲೆಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಶೀತದಂತಹ ಸಮಸ್ಯೆಗಳಿಗೆ ಬೇಗನೆ ಉಪಶಮನ ಪಡೆದುಕೊಳ್ಳಬಹುದು .

ಯಕೃತ್ ಅಂದರೆ ಲಿವರ್ , ಲಿವರ್ ಸಮಸ್ಯೆ ಇದ್ದರೆ ಅಥವಾ ಲಿವರ್ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಬೇಕು ಅಂದರೆ ಪ್ರತಿ ದಿನ ಒಂದು ತುಂಡು ಬೆಲ್ಲವನ್ನು ಸೇವಿಸುವುದರಿಂದ ಯಾವುದೇ ರೀತಿಯ ಲಿವರ್ ಸಮಸ್ಯೆ ಬರುವುದಿಲ್ಲ. ಇದರ ಜೊತೆಗೆ ಲಿವರ್ನ ಶುದ್ಧಿಗಾಗಿ ಬೆಲ್ಲ ಉತ್ತಮಕಾರಿಯಾಗಿದೆ . ಪ್ರತಿ ದಿನ ಒಂದು ಬೆಲ್ಲದ ದುಡ್ಡನ್ನು ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ಇರುವವರಿಗೆ ಇದು ತುಂಬಾನೇ ಸಹಾಯ ಮಾಡುತ್ತದೆ ಮತ್ತು ಇದರ ಜೊತೆಗೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದವರು ಬೆಲ್ಲವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಹೆಚ್ಚುವುದರ ಜೊತೆಗೆ ದೇಹದಲ್ಲಿ ಐರನ್ ಕಂಟೆಂಟ್ ಕೂಡ ಹೆಚ್ಚುತ್ತದೆ .

ಬೆಲ್ಲದಲ್ಲಿ ಐರನ್ ಅಂಶವು ಹೆಚ್ಚಾಗಿರುವುದರಿಂದ ಇದನ್ನು ಗರ್ಭಿಣಿ ಹೆಂಗಸರು ಸೇವಿಸುತ್ತಾರೆ ಹೊಟ್ಟೆಯಲ್ಲಿ ಇರುವಂತಹ ಶಿಶುವಿಗೆ ತುಂಬಾನೇ ಒಳ್ಳೆಯದು ಮತ್ತು ಗರ್ಭದಲ್ಲಿ ಇರುವಂತಹ ಶಿಶುವಿಗೆ ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಆಗುವುದರಲ್ಲಿ ಇದು ತುಂಬಾನೇ ಸಹಾಯ ಮಾಡುತ್ತದೆ .ಬೆಲ್ಲದಲ್ಲಿ ಫೈಬರ್ ಅಂಶವೂ ಇರುವುದರಿಂದ ಇದು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ಐರನ್ ಅಂಶ ಇರುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆಯನ್ನು ನಿವಾರಿಸುತ್ತದೆ . ಹೆಣ್ಣು ಮಕ್ಕಳಿಗೆ ಸಹಜವಾದ ಸಮಸ್ಯೆ ಎಂದರೆ ಅದು ಋತುಚಕ್ರದ ಸಮಸ್ಯೆ ಈ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳು ಪ್ರತಿದಿನ ಬೆಲ್ಲವನ್ನು ಸೇವಿಸುವುದರಿಂದ ಇಂತಹ ಸಮಸ್ಯೆಗೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಈ ಒಂದು ಬೆಲ್ಲ .