ಐಷಾರಾಮಿ ಜೀವನ ನಡೆಸ್ತಿದ್ದ ಟೆಕ್ಕಿಗಳಿಗೆ ಇದೀಗ ಹೆಚ್ಆರ್ ಕಡೆಯಿಂದ ಬರ್ತಿರೋ ಪಿಂಕ್ ಸ್ಲಿಪ್ ಆತಂಕಕ್ಕೀಡು ಮಾಡಿದೆ. ಯಾವಾಗ ಯಾರಿಗೆ ಪಿಂಕ್ ಸ್ಲಿಪ್ ಬರುತ್ತೋ ಅನ್ನೋಟೆನ್ಶನ್ ಶುರುವಾಗಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲೂ ಇದೇ ಆತಂಕ ಶುರುವಾಗಿದ್ದು, ಆಯಾಗಿ ನಿದ್ದೆ ಮಾಡ್ತಿದ್ದ ಟೆಕ್ಕಿಗಳು ಈಗ ನಿದ್ದೆಗೆಡುವಂತಾಗಿದೆ.
ಆರ್ಥಿಕ ಸಂಕಷ್ಟ ಅನ್ನೋದು ಐಟಿ ಕಂಪನಿಗಳಿಗೆ ತುಂಬಾ ಹೊಡೆತ ಕೊಟ್ಟಿದೆ. ಕಾಸ್ಟ್ಕಟಿಂಗ್ ಹೆಸರಲ್ಲಿ ಕೆಲಸಕ್ಕೆ ಕತ್ತರಿ ಹಾಕ್ತಿವೆ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಯಾವುದೇ ರೀತಿಯ ಕನಿಕರ ತೋರಿಸದೆ ಪಿಂಕ್ಸ್ಲಿಪ್ ಕೈಗಿಟ್ಟು ಮನೆಗೆ ಕಳಿಸ್ತಿವೆ. ನಿಮ್ಮಸೇವೆ ನಮಗೆ ಸದ್ಯಕ್ಕೆ ಅಗತ್ಯವಿಲ್ಲ. 3 ತಿಂಗಳಲ್ಲಿ ಕೆಲಸದಿಂದ ತೆಗೆಯಲಾಗುವುದು ಎಂದು ನೋಟಿಸ್ ನೀಡ್ತಿವೆ.
ಸ್ವಇಚ್ಛೆಯಿಂದ ರಿಸೈನ್ ಮಡಿದರೆ, ನಿಮಗೆ ಬರಬೇಕಾದ ಬಾಕಿ ಸೆಟಲ್ಮೆಂಟ್ ಮಾಡ್ತೀವಿ.ಇಲ್ಲದಿದರೆ ಸರಿಯಾಗಿ ಕೆಲ್ಸ ಮಾಡಲ್ಲ ಅಂತ ಕೆಲಸದಿಂದ ಕಿತ್ತಾಕ್ತೀವಿ. ಇದ್ರಿಂದ ನಿಮ್ಮ ಮುಂದಿನ ಕೆರಿಯರ್ಗೂ ತೊಂದರೆ ಆಗುತ್ತೆ. ಯಾವುದ್ಕೂ ನೀವೇ ಮುಂದೆ ಬಂದು ರಿಸೈನ್ ಮಾಡಿದರೆ ಒಳ್ಳೇದು ಅಂತ ಐಟಿ ಕಂಪನಿಗಳು ಹೇಳ್ತೀವೆ.
ಕಾಗ್ನಿಜೆಂಟ್ ಕಂಪನಿಯು ಬರೋಬ್ಬರಿ 7 ಸಾವಿರ ನೌಕರರಿಗೆ ಕೊಕ್‌ಕೊಟ್ಟಿದೆ. ದೇಶದ ಅತೀ ದೊಡ್ಡ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ನಲ್ಲೂ 12 ಸಾವಿರ ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಹೆಚ್‌ಪಿ ಕಂಪನಿಯಲ್ಲೂ 7ರಿಂದ 9 ಸಾವಿರ ಉದ್ಯೋಗ ಕಡಿತಕ್ಕೆ ಚಿಂತಿಸಲಾಗಿದೆ ಎಂದು ತಿಳಿದುಬಂದಿದೆ. ಐಬಿಎಂ ಕಂಪನಿಯಲ್ಲಿ ಈಗಾಗಲೇ 15 ಸಾವಿರ ಉದ್ಯೋಗಿಗಳು ಮನೆಗೆ ಹೋಗಿದ್ದಾರಂತೆ. ಬೆಂಗಳೂರು ಬ್ರಾಂಚ್ ಮೂಲಕವೇ ಕಾಸ್ಟ್ ಕಟಿಂಗ್ ಶುರುವಾಗಿದೆಯಂತೆ. ಮೊದಲೆಲ್ಲಾ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಅಂದರೆ ಅಚ್ಚರಿಯಿಂದ ನೋಡ್ತಿದ್ದ ಜನರು ಈಗ ಅಯ್ಯೋ. ಪಾಪ ಅಂತ ಕನಿಕರ ಪಡ್ತಿದ್ದಾರೆ. ಇದು ವಿಪರ್ಯಾಸವೇ ಸರಿ.