ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು.
ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ ಆಚರಿಸಲಾಗಿದೆ.
ಹಣ್ಣು- ಡ್ರೈ ಫ್ರೂಟ್ಸ್ನ 1000ಕೆಜಿ ತೂಕದ ಕೇಕ್ ಅನ್ನ ಗೋವರ್ಧನಗಿರಿ ಬೆಟ್ಟ ಮಾದರಿಯಲ್ಲಿ ತಯಾರಿಸಲಾಗಿತ್ತು. ಜೊತೆಗೆ ದೇವರ ನೈವೇದ್ಯಕ್ಕೆ 56 ತರದ ತಿಂಡಿ ತಿನಿಸುಗಳನ್ನ ಇಡಲಾಯಿತು. ಎರಡು ಹಸುಗಳನ್ನ ತರಿಸಿ ಸಂಪ್ರದಾಯಿಕವಾಗಿ ಪೂಜೆಯನ್ನ ಕೂಡ ಸಲ್ಲಿಸಲಾಯಿತು.
ಪೂಜೆ ಪುನಸ್ಕಾರಗಳ ನಂತರ, ನೆರೆದಿದ್ದ ಸಾವಿರಾರು ಭಕ್ತರಿಗೆ ಅದೇ ಕೇಕ್ನ್ನ ಪ್ರಸಾದವಾಗಿ ನೀಡಲಾಯಿತು. ಒಟ್ಟಾರೆ, ಈ ಬಾರಿ ಇಸ್ಕಾನ್ನಲ್ಲಿ ನಡೆದ ಗೋವರ್ಧನ ಪೂಜೆ ತುಂಬಾನೆ ವಿಶೇಷವಾಗಿದ್ದು, ದೇವರ ದರ್ಶನ ಪಡೆದ ಭಕ್ತರು ಕೂಡ ಖುಷಿ ಪಟ್ರು.