ಉಪಯುಕ್ತ ಮಾಹಿತಿ

ನಿಮ್ಮ ಮಕ್ಕಳಿಗೆ ಕಣ್ಣಿಗೆ ಕಾಡಿಗೆ ಹಚ್ಚೋ ಮುಂಚೆ ಇದನೊಮ್ಮೆ ತಪ್ಪದೇ ಓದಿ…

By admin

December 19, 2018

ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಲಾಗುತ್ತದೆ.

ಆದ್ರೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚೋದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಮಕ್ಕಳ ಕಣ್ಣಿಗೆ ಕೈ ತಾಗುವುದುಂಟು. ಹಾಗೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ.

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆ. ಇದು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ.

ಪ್ರತಿ ದಿನ ಕಣ್ಣಿಗೆ ಕಾಡಿಗೆ ಹಚ್ಚುವುದ್ರಿಂದ ಮಕ್ಕಳ ಕಣ್ಣಿನಲ್ಲಿ ಸ್ವಲ್ಪ ಪ್ರಮಾಣದ ಕಾಡಿಗೆ ಉಳಿದುಕೊಳ್ಳುತ್ತದೆ. ಇದು ಅಲರ್ಜಿಗೆ ಕಾರಣವಾಗಬಹುದು. ತುರಿಕೆ ಕಾಣಿಸಿಕೊಳ್ಳುತ್ತದೆ. ಅಸ್ಪಷ್ಟತೆ ಸಮಸ್ಯೆ ಕೂಡ ಕಾಡುವುದುಂಟು.

ಕಾಡಿಗೆಯಲ್ಲಿ ಸೀಸದ ಪ್ರಮಾಣ ಹೆಚ್ಚಿದ್ದರೆ ಅದು ಮಕ್ಕಳ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಮೆದುಳಿನ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ.

ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಕಾಡಿಗೆಯನ್ನು ಹಚ್ಚಿ. ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ನೀಡಿ.

ಕಾಡಿಗೆ ಹಚ್ಚಿದ ತಕ್ಷಣ ಮಗು ಕಣ್ಣಿಗೆ ಕೈ ಹಾಕುತ್ತಿದ್ದರೆ ತುರಿಕೆಯಾಗ್ತಿದೆ ಎಂದರ್ಥ. ಹಾಗಾಗಿ ತಕ್ಷಣ ಮಗುವಿನ ಕಾಡಿಗೆಯನ್ನು ಅಳಿಸಿ.