ಸುದ್ದಿ

ಖಳ ನಟ ಉದಯ್ ಗೆ ದೃವಾ ಆಮಂತ್ರಣ. ಮಿಸ್ ಯೂ ಮಚ್ಚಾ ಎಂದು ಗೆಳೆಯನ ನೆನೆದು ನೋವಲ್ಲು ಸಂತಸ ಕೊಟ್ಟ ದೃವಾ ಸರ್ಜಾ.

By admin

November 20, 2019

ಚಂದನವನದ ಆ್ಯಕ್ಷನ್ ಪ್ರಿನ್ಸ್ ದೃವಾ ಸರ್ಜಾ ಮೊನ್ನೆ ಮೊನ್ನೆ ಅಷ್ಟೇ ದುರಂತ ಅಂತ್ಯ ಕಂಡ ಖಳನಾಯಕ ಉದಯ್ ಅವರ ಅಕ್ಕನ ಗಂಡ ಅಂದರೆ ಬಾವ ರಾಜ ನಿರ್ದೇಶನದ ಐರಾ ಚಿತ್ರದ ಮೂಹೂರ್ತವನ್ನು ಉದಯ್ ಅವರ ಸಮಾಧಿ ಬಳಿ ಕ್ಲಾಪ್ ಮಾಡುವ ಆ ಚಿತ್ರಕ್ಕೆ ಚಾಲನೆಯನ್ನು ಮಾಡಿ ಗೆಳೆಯನನ್ನು ನೆನೆದು ಭಾವುಕರಾಗಿದ್ದರು.

ದೃವಾ ಸರ್ಜಾ ಮದುವೆಯ ತಯಾರಿ ಕೂಡ ಭರ್ಜರಿಯಾಗಿ ಸಾಗಿದೆ. ಇತ್ತ ದೃವಾ ಸರ್ಜಾ ಮದುವೆಯ ಆಮಂತ್ರಣ ಪತ್ರಿಕೆ ಹಿಡಿದು ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಮನೆ ಗಳತ್ತ ಹೆಜ್ಜೆ ಹಾಕಿ ಎಲ್ಲರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ದೃವಸರ್ಜಾ ಹಾಗೂ ಮಾಸ್ತಿಗುಡಿಯ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡ ಖಳನಾಯಕ ಉದಯ್ ಇಬ್ಬರೂ ಬಾಲ್ಯ ಸ್ನೇಹಿತರು ಒಟ್ಟಾಗಿ ವಿದ್ಯಾಭ್ಯಾಸ ಕಲಿತವರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.

ಉದಯ್ ಗೆಳೆಯ ಇರದಿದ್ದರೂ ಸಹ ದ್ರುವಸರ್ಜಾ ತಮ್ಮ‌ ಮದುವೆಯ ಆಮಂತ್ರಣ ಪತ್ರಿಕೆಯನ್ನು ಉದಯ್ ಅವರ ಮನೆಗೆ ತಾವೇ ಹೋಗಿ ಉದಯ್ ತಾಯಿ ತಂಗಿಯನ್ನು ಆತ್ಮೀಯವಾಗಿ ಮದುವೆಗೆ ಆಮಂತ್ರಣ ನೀಡಿ ಬಂದಿದ್ದಾರೆ. ಆದರೆ ಮನೆಯಲ್ಲಿ ಇಲ್ಲದ ಗೆಳೆಯನ ನೆನಪು ಮಾತ್ರ ಒಂದು ಕ್ಷಣ ಅವರ ಮನ ಹಿಂಡಿದ ಅನುಭವವನ್ನು ನೀಡಿ ನೋವು ತರಿಸಿತ್ತು.

ಇನ್ನು ನಟ ದೃವಾ ಸರ್ಜಾ ಖುದ್ದಾಗಿ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ತನ್ನ ಮದುವೆಯ ಆಹ್ವಾನ ನೀಡಿರುವುದು ಕುಟುಂಬಕ್ಕೆ ಅವರಿಲ್ಲದ ನಡುವೆಯೂ ಕೊಂಚ ನೆಮ್ಮದಿ ನೀಡಿದೆ.ಬಾಲ್ಯ ಸ್ನೇಹಿತರ ಮರೆಯದೇ ತನ್ನ ಮದುವೆ ಆಹ್ವಾನ ನೀಡುವ ಮೂಲಕ ದೃವಾ ಸರ್ಜಾ ತನ್ನತನವನ್ನು ಮೆರೆದಿದ್ದಾರೆ. ಇನ್ನು ಭರ್ಜರಿ ಹುಡುಗನ ಮದುವೆ ಸಂಭ್ರಮ ಚಂದನವನದ ತುಂಬಾ ಹರಡಿದೆ.