Village

ಕೋಲಾರ ಜಿಲ್ಲೆಯಲ್ಲಿರುವ ಹುಂಗೇನಹಳ್ಳಿ ಗ್ರಾಮದ ಬಗ್ಗೆ ನಿಮಗೆಷ್ಟು ಗೊತ್ತು? ಓದಿ ಈ ಲೇಖನವನ್ನು

By Raj Rao

January 04, 2022

ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ.

ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ.

ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್ ಪ್ರಾಂತ್ಯದ ಕಂಚಿ ಪಟ್ಟಣದಿಂದ ಬಂದವರು.ಇಲ್ಲಿ ಬಂದು ಪ್ರಕೃತಿಯ ಅನುಕೂಲವನ್ನು ನೋಡಿ ಇಲ್ಲಿ ನೆಲೆಸಲು ನಿರ್ಧರಿಸಿದರು.ಆಗ ಸ್ಥಳದಲ್ಲಿ ಹೊಂಗೆ ಮರಗಳು ವಿಪರೀತ ಬೆಳೆದಿದ್ದವು.ಆ ಮರದ ಕೆಳಗೆ ವಾಸ ಮಾಡಿ ಗ್ರಾಮ ಮತ್ತು ಕೋಟೆ ಕಟ್ಟಿದರು. ಹೊಂಗೆ ಮರಗಳು ಆಶ್ರಯ ಕೊಟ್ಟಿದ್ದರಿಂದ ಗೊತ್ರದ ಹೆಸರನ್ನು ಹುಂಗಲರ ಗೊತ್ರದವರು ಎಂದು ಕರೆಯುತ್ತಾರೆ.ಹೊಂಗೆ ಮರದ ಸೌದೆಯನ್ನು ಅಡಿಗೆ ಮಾಡಲು ಬಳಸುವುದಿಲ್ಲ. ಕೆಂಪೇಗೌಡರ ಪಾಳೇಗಾರರಾಗಿದ್ದರು. ಈ ಊರಿನಲ್ಲಿ ಮೊದಲಿನಿಂದಲೂ ವಿದ್ಯಾವಂತರಿದ್ದರು.

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರವರ ತಾಯಿ ಈ ಗ್ರಾಮದವರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ‌‌‌‌‌‌‌‌‌‌‌‌‌‌ರವರು ಈ ಗ್ರಾಮದಲ್ಲಿ ಕೆಲವು ದಿನಗಳ ಕಾಲ ನೆಲೆಸಿದ್ದರು.ಮತ್ತು ಈ ಗ್ರಾಮದಲ್ಲಿ ಮೊದಲಿನಿಂದಲೂ ಹಲವು ವಿದ್ಯಾವಂತರು ಈ ನಾಡಿಗೆ ಸೇವೆ ಸಲ್ಲಿಸಿದ್ದಾರೆ.ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ,ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ.

ಶೈಕ್ಷಣಿಕವಾಗಿ ತಾಲ್ಲೂಕಿಗೆ ಅತಿ ಹೆಚ್ಚು ಶಿಕ್ಷಕರನ್ನು ನೀಡಿದ ಗ್ರಾಮ ಎಂದು ಇತಿಹಾಸ ಹೇಳುತ್ತದೆ.

ರಾಜಕೀಯವಾಗಿಯೂ ಈ ಗ್ರಾಮ ಪ್ರಸಿದ್ಧಿ ಪಡೆದಿದೆ.ಶ್ರೀ ದೇವಿರಪ್ಪ ಈ ಗ್ರಾಮದ ಮೊದಲ ಶಾಸಕ.ಇಂಜಿನೀಯರ್ ಹಿರಣ್ಯಗೌಡರವರು, ಇನ್ನೂ ಕೆಲವರು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ.ಉದ್ಯಮದಲ್ಲೂ ಈ ಗ್ರಾಮ ಹೆಸರು ಪಡೆದಿದೆ ಇಟ್ಟಿಗೆ & ಹೆಂಚು ಕಾರ್ಖಾನೆ ಇದೆ.