ಸುದ್ದಿ

‘ನಿಯಮ ಉಲ್ಲಂಗಿಸಲಿಲ್ಲ’ ‘ಯಾವುದೆ ವಿದೇಶೀಯ ಫಂಡ್ಸ್ ಪಡೆದಿಲ್ಲ’ ; ಇನ್ಫೋಸಿಸ್

By admin

May 14, 2019

ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಪ್ರತಿಷ್ಠಾನದ ಮುಕ್ಯಸ್ಥೆ ಸುದಾ ಮೂರ್ತಿ, ನಮ್ಮ ಸಂಸ್ಥೆ FCRA ಅಡಿಯಲ್ಲಿ ಬರುವುದಿಲ್ಲ. 2016ರಲ್ಲಿ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಬಗ್ಗೆ ಇಲಾಖೆಗೆ ತಿಳಿಸಲಾಗಿದೆ ಎಂದು ಕಾರ್ಪೊರೆಟ್ ವ್ಯವಹಾರಗಳ ಸಂವಹನ ವಿಭಾಗದ ರಿಷಿ ಬಸು ಎಂದು ಪ್ರತಿಕ್ರಿಯಿಸಿದ್ದಾರೆ.

ಜನವರಿ 2016ರಲ್ಲಿ ಇನ್ಫೋಸಿಸ್ ಸಂಸ್ಥೆ FCRA ಕಾಯ್ಡೆಯಡಿಯಲ್ಲಿತ್ತು. ಆದರೆ, ಮೇ 2016ರಲ್ಲಿ ಈ ಕಾಯ್ದೆಯಡಿಯಿಂದ ಹೊರ ಬಂದಿದೆ. ಸದರಿ ಕಾಯ್ದೆಗೆ 2010ರಲ್ಲಿ ತಿದ್ದುಪಡಿಯಾಗಿದೆ. ಹೀಗಾಗಿ, ನಮ್ಮ ಸಂಸ್ಥೆ ಈ ಕಾಯ್ಡೆಯಡಿಯಲ್ಲಿ ಬರುವುದಿಲ್ಲ. ಸತತ ಮನವಿ ನಂತರ 2016ರಲ್ಲಿ FCRA ಕಾಯ್ಡೆಯಡಿ ಬರುವ ಎನ್ ಜಿಒಗಳ ಪಟ್ಟಿಯಿಂದ ಇನ್ಫೋಸಿಸ್ ಹೊರ ಬಂದಿದೆ. ಈ ಕುರಿತಂತೆ ಸರ್ಕಾರ ನೀಡಿದ ಪತ್ರವು ನಮ್ಮ ಬಳಿ ಇದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ವಕ್ತಾರರು ಹೇಳಿದ್ದಾರೆ.

2016 ರಿಂದ 2018ರ ಆರ್ಥಿಕ ವರ್ಷದ ತನಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಮೇಲ್ಕಂಡ ಕಾಯ್ದೆಯಡಿಯಿಂದ ಹೊರಬಂದಿರುವುದರಿಂದ ಈ ಬಗ್ಗೆ ಯಾವುದೇ ದಾಖಲೆ ಒದಗಿಸಿಲ್ಲ. ವಿದೇಶದಿಂದ ದೇಣಿಗೆ ಪಡೆಯುತ್ತಿಲ್ಲ ಎಂದು ತೋರಿಸಲು ಜುಲೈ 2018ರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಕಾರಕ್ಕೆ ದಾಖಲೆ ನೀಡಲಾಗಿದೆ. ಇದಾದ ಬಳಿಕ ಏಪ್ರಿಲ್ 2018ರ ನಂತರ FCRA ಆಡಿಯಲ್ಲಿ ರಿಟರ್ನ್ಸ್ ಸಲ್ಲಿಸುವಂತೆ ಇಲಾಖೆಯಿಂದ ಇನ್ಫೋಸಿಸ್ ಫೌಂಡೇಷನ್ ಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ರಿಷಿ ಬಸು(ರಾಜರ್ಷಿ ಬಸು) ಸ್ಪಷ್ಟಪಡಿಸಿದ್ದಾರೆ.