ಸುದ್ದಿ

ಇನ್ಫೋಸಿಸ್ ಉದ್ಯೋಗಿಗಳಿಗೆ ಕಾದಿದೆ ಒಂದು ಶಾಕಿಂಗ್ ಸುದ್ದಿ ; 10000 ಸಿಬ್ಬಂದಿ ಕೆಲಸಕ್ಕೆ ಕತ್ತರಿ..! ಯಾಕೆ ಗೊತ್ತಾ?

By admin

November 06, 2019

ಉದ್ಯೋಗ ಹಂತ 6ರಲ್ಲಿ ಬರುವ ಹಿರಿಯ ಮ್ಯಾನೇಜರ್‌ಗಳ ಕೆಲಸಕ್ಕೆ ಇದೀಗ ಕುತ್ತು ಬಂದಿದೆ. ಇನ್ಫೋಸಿಸ್ನ ಹಂತ 6,7, ಹಾಗೂ 8ರಲ್ಲಿ ಒಟ್ಟು 30,092 ಉದ್ಯೋಗಿಗಳು ಇದೀಗ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 2,200 ಮಂದಿ ಉದ್ಯೋಗ ಕಳೆದು ಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಐಟಿ ದ್ಯತ್ಯ ಕಾಗ್ನಿಜೆಂಟ್ಸಂಸ್ಥೆ ಕೂಡಾ ತನ್ನ 13,000 ನೌಕರರನ್ನು ಕೆಲಸದಿಂದ ಕಿತ್ತು ಹಾಕಿತ್ತು. ಇನ್ಫೋಸಿಸ್ಕೂಡಾ ಇದೀಗ ಕಾಗ್ನಿಜೆಂಟ್ ಹಾದಿಯನ್ನೇ ತುಳಿಯುತ್ತಿದೆ.

ಹಿರಿಯ ಉದ್ಯೋಗಿಗಳ ಕಥೆ ಹೀಗಾದ್ರೆ, ಕಿರಿಯ ಉದ್ಯೋಗಿಗಳೂ ಕೂಡಾ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿ ಇದ್ದಾರೆ. ಹಂತ 3, 4, ಹಾಗೂ 5ರಲ್ಲಿ ಬರುವ ಉದ್ಯೋಗಿಗಳ ಪೈಕಿ ಶೇ. 2-5ರಷ್ಟು ನೌಕರರೂ ಕೂಡಾ ಕೆಲಸ ಕಳೆದುಕೊಳ್ಳಲಿದ್ದಾರೆ. ಇನ್ಫೋಸಿಸ್ನಲ್ಲಿ ಸದ್ಯ ಮಧ್ಯಮ ಕ್ರಮಾಂಕದಲ್ಲಿ ಸರಿಸುಮಾರು 1 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ.2 ರಿಂದ 5ರಷ್ಟು ಮಂದಿಯನ್ನು ಸಂಸ್ಥೆ ಕೆಲಸದಿಂದ ಕಿತ್ತುಹಾಕಲು ಹೊರಟರೆ, ಸುಮಾರು 4 ರಿಂದ10 ಸಾವಿರ ಮಂದಿ ಉದ್ಯೋಗ ವಂಚಿತರಾಗಲಿದ್ದಾರೆ.

ಅಷ್ಟೇ ಅಲ್ಲ, ಹಿರಿಯ ಕಾರ್ಯನಿರ್ವಾಹಕ ಹುದ್ದೆಯಡಿ ಬರುವ ಸಹಾಯಕ ಉಪಾಧ್ಯಕ್ಷರು,ಉಪಾಧ್ಯಕ್ಷರು, ಹಿರಿಯ ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷರಿಗೂ ಕೆಲಸ ಬಿಡುವಂತೆ ಇನ್ಫೋಸಿಸ್ ಹೇಳಿದೆ. ಅಂದರೆ ಈ ಹಂತದ ಒಟ್ಟು 50 ಮಂದಿ ಉದ್ಯೋಗ ವಂಚಿತರಾಗಲಿದ್ದಾರೆ. ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಇನ್ಫೋಸಿಸ್ ಇದೊಂದು ಆಂತರಿಕ ಪ್ರಕ್ರಿಯೆ ಎಂದು ಹೇಳಿದೆ. ಸಾಮೂಹಿಕವಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಪರಿಭಾವಿಸುವ ಅಗತ್ಯವಿಲ್ಲವೆಂದು ಸ್ಪಷ್ಟನೆ ನೀಡಿರುವ ಇನ್ಫೋಸಿಸ್, ಕಾರ್ಯನಿರ್ವಹಣೆಯ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಂಡಿರೋದಾಗಿ ಹೇಳಿದೆ.

ಹಾಗೆ ನೋಡಿದ್ರೆ, ಕಳೆದ ಕೆಲವು ವರ್ಷಗಳಿಂದ ಇನ್ಫೋಸಿಸ್‌ನಲ್ಲಿ ಸಾಮೂಹಿಕ ಉದ್ಯೋಗ ಕಡಿತ ಆಗಿರಲಿಲ್ಲ. ಕೇವಲ ಕಾರ್ಯಕ್ಷಮತೆ ಆಧಾರದ ಮೇಲಷ್ಟೇ ಉದ್ಯೋಗ ಕಡಿತ ಮಾಡಲಾಗುತ್ತಿತ್ತು. ಆದ್ರೆ ಇದೀಗ ನಡೆಯುತ್ತಿರುವ ಉದ್ಯೋಗ ಕಡಿತ ಬೇರೆಯದೇ ರೀತಿಯಲ್ಲಿ ಕಂಡು ಬರ್ತಿದೆ. ಹಾಗೆ ನೋಡಿದ್ರೆ, ಐಟಿ ಉದ್ಯಮದಲ್ಲಿ ಇತ್ತೀಚೆಗೆ ಉದ್ಯೋಗ ಕಡಿತ ಸಹಜವಾಗ್ತಿದೆ.ಸಂಸ್ಥೆಗಳು ಬಹುಮುಖ ಪ್ರತಿಭೆಯುಳ್ಳ ನೌಕರರ ಹುಡುಕಾಟ ನಡೆಸುತ್ತಿದೆ. ಕಡಿಮೆ ಮಾನವ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಉತ್ಪಾದಕತೆ ನೀಡುವ ಉದ್ದೇಶವನ್ನು ಹೊಂದಿವೆ.