ಸುದ್ದಿ

ಉಗ್ರರ ದಾಳಿಯ ನಂತರ ವೀರ ಯೋಧರಿಗಾಗಿ ಅತ್ಯಂತ ಮಹತ್ವದ ನಿರ್ಧಾರೆ ತೆಗೆದುಕೊಂಡ ಕೇಂದ್ರ ಸರ್ಕಾರ…

By admin

February 21, 2019

ಪುಲ್ವಾಮ ಭಯೋತ್ಪಾದಕ ದಾಳಿ ನಂತ್ರ ಭಾರತ ಸರ್ಕಾರ, ಯೋಧರ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯ್ತಿರುವ ಎಲ್ಲ ಭದ್ರತಾ ಸಿಬ್ಬಂದಿ ಶ್ರೀನಗರ ರಸ್ತೆಯಲ್ಲಿ ಪ್ರಯಾಣ ಬೆಳೆಸುವುದಿಲ್ಲ. ಭದ್ರತಾ ಸಿಬ್ಬಂದಿಯನ್ನು ವಾಯು ಮಾರ್ಗದ ಮೂಲಕ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು.

ಬುಧವಾರ ಸಂಜೆ ಭದ್ರತಾ ದಳದ ಮುಖ್ಯಸ್ಥರು ಅಧಿಕೃತ ಹೇಳಿಕೆ ನೀಡಿದ್ದರು. ಗುರುವಾರದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಅಸ್ಸಾಂ ರೈಫಲ್ಸ್, ಬಿಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಎನ್ ಎಸ್ ಜಿಗೆ ಈ ಆದೇಶ ಅನ್ವಯಿಸಲಿದೆ.

ಕರ್ತವ್ಯ ಮುಗಿಸಿ ಬರ್ತಿರುವ, ವರ್ಗಾವಣೆಯಾಗಿರುವ, ಮನೆಗೆ ಬರ್ತಿರುವ ಅಥವಾ ಮನೆಯಿಂದ ವಾಪಸ್ ಆಗ್ತಿರುವ ಯೋಧರು ರಸ್ತೆ ಮಾರ್ಗದಲ್ಲಿ ಬರುವುದಿಲ್ಲ. ಎಲ್ಲರಿಗೂ ವಿಮಾನ ವ್ಯವಸ್ಥೆ ಕಲ್ಪಿಸಲಾಗುವುದು.

ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮಾತ್ರ ವಿಮಾನದ ವ್ಯವಸ್ಥೆಯಿತ್ತು. ಈಗ ಎಲ್ಲ ಯೋಧರು ವಿಮಾನ ಪ್ರಯಾಣ ಬೆಳೆಸಬಹುದಾಗಿದೆ. ದೆಹಲಿಯಿಂದ ಶ್ರೀನಗರ, ಶ್ರೀನಗರದಿಂದ ದೆಹಲಿ, ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಲು ವಿಮಾನ ವ್ಯವಸ್ಥೆ ಮಾಡಲಾಗಿದ್ದು, 7 ಲಕ್ಷ 8 ಸಾವಿರ ಯೋಧರು ಇದ್ರ ಲಾಭ ಪಡೆಯಲಿದ್ದಾರೆಂದು ಗೃಹ ಸಚಿವಾಲಯ ಟ್ವಿಟ್ ಮಾಡಿದೆ.