ಸುದ್ದಿ

IMA ವಿರುದ್ಧ 11 ಸಾವಿರಕ್ಕು ಹೆಚ್ಚು ದಾಕಲಾದ ಕಂಪ್ಲೆಂಟ್…..!

By admin

June 12, 2019

ಐಎಂಎ ಜ್ಯುವೆಲ್ಲರ್ಸ್ ನಿಂದ ಮೋಸಕ್ಕೊಳಗಾಗಿರುವವರ ಕಂಪ್ಲೆಂಟ್ ಸಂಖ್ಯೆ 11 ಸಾವಿರಕ್ಕೇರಿದೆ. ಶಿವಾಜಿನಗರ ಸಮದ್ ಹೌಸ್ ಚೌಟ್ರಿಯಲ್ಲಿ ಬಂಡಲ್ ಬಂಡಲ್‍ಗಟ್ಟೆ ಕಂಪ್ಲೆಂಟ್‍ಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ.

ಎಸ್‍ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಸಲೀಂ ನೇಮಕ ಬಹುತೇಕ ಖಚಿತ ಅಂತ ತಿಳಿದು ಬಂದಿದೆ. ಮುಸ್ಲಿಂ ಸಮುದಾಯದವರೇ ಆಗಿರುವ ಸಲೀಂ ನಿಯೋಜಿಸಿದ್ರೆ ಉತ್ತಮ, ತನಿಖೆಗೆ ಸಹಕಾರಿಯಾಗುತ್ತದೆ ಅನ್ನೋದು ಗೃಹ ಸಚಿವ ಎಂ.ಬಿ. ಪಾಟೀಲರ ಭಾವನೆ. ಹೀಗಾಗಿ, ಇಂದು ಗೃಹ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ.

ಒಂದು ವೇಳೆ, ಸಲೀಂ ಹಿಂದೆ ಸರಿದರೆ, ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ನೇಮಿಸುವ ಸಾಧ್ಯತೆಯೂ ಇದೆ. ಈ ಮಧ್ಯೆ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ನಾಪತ್ತೆಯಾಗಿರುವ ಐಎಂಎ ಮಾಲೀಕನ ವಿರುದ್ಧ ರಸ್ತೆಗಿಳಿದಿದ್ದ ಮೋಸ ಹೋದವರು, ಧಿಡೀರ್ ಅಂತ ಶಾಸಕ ರೋಷನ್ ಬೇಗ್ ಮನೆಗೆ ಲಗ್ಗೆ ಇಟ್ಟಿದರು. ಕೋಲ್ಸ್ ಪಾರ್ಕ್ ನಲ್ಲಿರುವ ರೋಷನ್ ಬೇಗ್ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪ್ರತಿಭಟನಾಕಾರರನ್ನ ಪೊಲೀಸರು ಮನವೊಲಿಸೋ ಯತ್ನ ಮಾಡಿದರು. ರೋಷನ್ ಬೇಗ್ ಮನೆಯಲ್ಲಿ ಇಲ್ಲ ಅನ್ನೋದು ತಿಳಿದು ಪ್ರತಿಭಟನಾಕಾರರು ಜಾಗ ಖಾಲಿ ಮಾಡಿದರು. ಶಾಸಕ ರೋಷನ್ ಬೇಗ್ ದೆಹಲಿಯಿಂದ ಬೆಂಗಳೂರಿಗೆ ಮರಳುತ್ತಿದ್ದು ಮುಂಜಾಗೃತ ಕ್ರಮವಾಗಿ ರೋಷನ್ ಬೇಗ್ ಮನೆ ಬಳಿ ಪೊಲೀಸ್ ಬೀಗಿ ಭದ್ರತೆ ಒದಗಿಸಲಾಗಿದೆ.