ಸುದ್ದಿ

ಕೇವಲ ತಬ್ಬಿಕೊಂಡ ಮಾತ್ರಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜುನಿಂದಲೇ ತೆಗೆದುಹಾಕಿದ್ರು..!

By admin

January 14, 2019

ವಿದ್ಯಾರ್ಥಿನಿಯೊಬ್ಬಳು ಯುವಕನೊಬ್ಬನನ್ನು ತಬ್ಬಿಕೊಂಡ ಕಾರಣ ಯೂನಿವರ್ಸಿಟಿ, ಅವಳನ್ನು ಕಾಲೇಜಿನಿಂದ ಉಚ್ಚಾಟಿಸಿದ್ದು, ಇದೀಗ ಅಪ್ಪುಗೆಯೇ ಆಕೆಯ ವಿದ್ಯಾರ್ಥಿ ಜೀವನಕ್ಕೆ ಸಂಚಕಾರ ತಂದಿದೆ.

ಈಜಿಪ್ಟ್ ನ ಅಲ್-ಅಝರ್ ಯೂನಿವರ್ಸಿಟಿ, ವಿದ್ಯಾರ್ಥಿನಿಯ ಈ ವರ್ತನೆಯಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ ಈ ಕ್ರಮಕೈಗೊಂಡಿದೆ.

ಅಲ್-ಅಝರ್ ಯೂನಿವರ್ಸಿಟಿಯ ಮನ್ಸೌರಾದಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಮಂಡಿಯೂರಿ ಹೂವಿನ ಬೊಕ್ಕೆ ಕೊಟ್ಟಿದ್ದು, ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದರು.

ಇದರ ವಿಡಿಯೊ ಎಲ್ಲ ಕಡೆ ಹರಿದಾಡಿದ್ದು, ಯೂನಿವರ್ಸಿಟಿಯ ಆಡಳಿತ ಮಂಡಳಿಯವರೆಗೂ ತಲುಪಿತ್ತು. ಅವಿವಾಹಿತ ಮಹಿಳೆ-ಪುರುಷ ಅಪ್ಪಿಕೊಳ್ಳುವುದು ಸಮಾಜದ ಮೌಲ್ಯಗಳಿಗೆ ವಿರುದ್ಧ ಹಾಗೂ ಇದರಿಂದ ಯೂನಿವರ್ಸಿಟಿಯ ಗೌರವಕ್ಕೂ ಧಕ್ಕೆ ಆಗಿದೆ. ಹಾಗಾಗಿ ಆಕೆಯನ್ನು ಕಾಲೇಜಿನಿಂದ ಹೊರಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.