ಆರೋಗ್ಯ

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ. ಈ ಅರೋಗ್ಯ ಮಾಹಿತಿ ನೋಡಿ.

By admin

November 25, 2019

ಜಗತ್ತಿನಲ್ಲಿ ಬಿಸಿ ನೀರು ಕುಡಿಯುವರ ಸಂಖ್ಯೆ ಬಹಳ ಕಮ್ಮಿ ಹೇಳಿದರೆ ತಪ್ಪಾಗಲ್ಲ, ವೈದ್ಯರು ಸಲಹೆಯನ್ನ ನೀಡಿದರು ಕೂಡ ಜನರು ಬಿಸಿ ನೀರನ್ನ ಕುಡಿಯಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನು ಒಬ್ಬ ಮನುಷ್ಯ ಆಹಾರವಿಲ್ಲದೆ ಬಹಳ ಕಾಲ ಬದುಕಬಹುದು ಆದರೆ ನೀರಿಲ್ಲದೆ ಬಹಳ ಕಾಲ ಬದುಕಲು ಸಾಧ್ಯವಿಲ್ಲ, ನಮ್ಮ ದೇಹದಲ್ಲಿ ಎಷ್ಟು ನೀರು ಇರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಬಲವಾಗಿರುತ್ತದೆ. ಇನ್ನು ಬಿಸಿ ನೀರನ್ನ ದಿನಾಲೂ ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳಿದರೆ ಒಮ್ಮೆ ಆಶ್ಚರ್ಯ ಪಡುತ್ತೀರಾ, ಇನ್ನು ಬೆಳಗಿನ ಸಮಯದಲ್ಲಿ ತಣ್ಣಗಿನ ನೀರಿನ ಸೇವನೆಯ ಬದಲು ಬಿಸಿ ನೀರನ್ನ ಸೇವನೆ ಮಾಡಿದರೆ ಅನೇಕ ಆರೋಗ್ಯಕರ ಲಾಭಗಳನ್ನ ಪಡೆದುಕೊಳ್ಳಬಹುದು.

ಹಾಗಾದರೆ ಬಿಸಿ ನೀರಿನ ಸೇವನೆಯಿಂದ ದೇಹಕ್ಕೆ ಆಗುವ ಲಾಭಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗೋ ಓದಿ ಮತ್ತು ಈ ಆರೋಗ್ಯ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು ಬಿಸಿ ನಿರಿ ಉತ್ತಮವಾದ ಪರಿಹಾರವಾಗಿದೆ, ಬೆಳಗಿನ ಸಮಯದಲ್ಲಿ ಬಿಸಿ ನೀರನ್ನ ಸೇವನೆ ಮಾಡುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆ ಆಗುತ್ತದೆ ಎಂದು ಹೇಳುತ್ತಿದೆ ವೈದ್ಯಲೋಕ. ಇನ್ನು ದಿನಾಲೂ ಬಿಸಿ ನೀರನ್ನ ಸೇವನೆ ಮಾಡುವುದರಿಂದ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶ ದೇಹದಿಂದ ಹೊರಗೆ ಹೋಗುತ್ತದೆ, ಇನ್ನು ನಮ್ಮ ತಕ್ತವನ್ನ ಶುದ್ದೀಕರಿಸಲು ಬಿಸಿ ನೀರಿನ ಸೇವನೆ ಬಹಳ ಅತ್ಯುತ್ತಮ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಬಿಸಿ ನೀರನ್ನ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ, ಇನ್ನು ಬೆಳಿಗ್ಗೆ ಎದ್ದಾಗ ಬಿಸಿ ನೀರನ್ನ ಕುಡಿದರೆ ಚನ್ನಾಗಿ ಹಸಿವು ಆಗುತ್ತದೆ ಮತ್ತು ವಿಸರ್ಜನಾ ಕ್ರಿಯೆಯು ಸರವಾಗಿ ಆಗುತ್ತದೆ, ಇನ್ನು ಬೆಳಗಿನ ಸಮಯದಲ್ಲಿ ಬಿಸಿ ನೀರನ್ನ ಸೇವನೆ ಮಾಡಿದರೆ ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ. ಇನ್ನು ಆಹಾರ ಸೇವನೆಯ ನಂತರ ಗಂಟಲಲ್ಲಿ ಎಣ್ಣೆ ಅಥ ಜಡ್ಡಿನ ಪದಾರ್ಥಗಳು ಇದ್ದರೆ ಬಿಸಿ ನೀರನ್ನ ಕುಡಿಯುವುದು ಬಹಳ ಉತ್ತಮ, ಇನ್ನು ಬಿಸಿ ನೀರನ್ನ ಕುಡಿಯುವುದು ಕಿಡ್ನಿಗೆ ಬಹಳ ಒಳ್ಳೆಯದಾಗಿದೆ, ಇನ್ನು ಇಸಿ ನೀರನ್ನ ಕುಡಿಯುವುದರಿಂದ ಚರ್ಮದ ಸ್ಥಿತಿ ಸ್ಥಾಪಕತ್ವವು ಹೆಚ್ಚಾಗುತ್ತದೆ.

ಇನ್ನು ನೆಗಡಿಯಾಗಿ ಗಂಟಲಲ್ಲಿ ಕಫವು ಸೇರಿದ್ದರೆ ಬೆಳಗಿನ ಸಮಯದಲ್ಲಿ ಬಿಸಿ ನೀರನ್ನ ಸೇವನೆ ಮಾಡಿದರೆ ಕಫವು ಕಡಿಮೆಯಾಗಿ ನೆಗಡಿ ಕಡಿಮೆ ಆಗುತ್ತದೆ. ಇನ್ನು ಬಿಸಿ ಇರಿನ ಜೊತೆಗೆ ಜೇನು ತುಪ್ಪ ಮತ್ತು ನಿಂಬೆ ರಸವನ್ನ ಸೇರಿಸಿ ಕುಡಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಬೆಳಿಗ್ಗೆ ಬಿಸಿ ನೀರನ್ನ ಸೇವನೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಯು ಸರಾಗವಾಗಿ ಆಗುತ್ತದೆ. ಇನ್ನು ಬಿಸಿ ನೀರನ್ನ ಸೇವನೆ ಮಾಡುವುದರಿಂದ ನಮ್ಮ ಶರೀರರು ಶುದ್ಧವಾಗುತ್ತದೆ ಮತ್ತು ದೇಹದಲ್ಲಿನ ಎಲ್ಲಾ ಮಲಿನಗಳು ನಮ್ಮ ದೇಹದಿಂದ ತೊಲಗಿ ಹೋಗುತ್ತದೆ, ಇನ್ನು ಬಿಸಿ ನೀರು ನರಮಂಡಲವನ್ನ ಶುದ್ಧ ಮಾಡುವುದರ ಜೊತೆಗೆ ನಮ್ಮ ಮೆದುಳು ಮತ್ತು ಮನಸ್ಸು ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.