ಸುದ್ದಿ

ವಾಸನೆ ಗ್ರಹಿಸುತ್ತಿದ್ದ ಕುದುರೆ ಎಚ್ಚೆತ್ತ ಮಹಿಳೆ ವೈದ್ಯರ ಬಳಿ ತೆರಳಿದಾಗ ಕಾದಿತ್ತು ಶಾಕ್​.

By admin

February 19, 2020

ತನಗೆ ಮೆದುಳಿನ ಕ್ಯಾನ್ಸರ್ ಗಡ್ದೆ ಇದೆ ಎಂಬುದನ್ನು ಅರಿಯದ ಮಹಿಳೆಯೊಬ್ಬಳಿಗೆ ಸಾಕಿದ ಕುದುರೆಯೇ ನೆರವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ತನ್ನ ಮಾಲಕಿಯ ಕ್ಯಾನ್ಸರ್​ ವಾಸನೆಯನ್ನು ಮೂಗಿನಿಂದಲೇ ಕಂಡುಹಿಡಿದು ಅವಳನ್ನು ಚಿಕಿತ್ಸೆಗೆ ಪ್ರೇರೇಪಿಸಿದ ಮನಕಲಕುವ ಸ್ಟೋರಿ ಇದು.

ಇಂಗ್ಲೆಂಡ್​ ಲ್ಯಾಂಚ್​ಶೈರ್​ನ ಬ್ಲ್ಯಾಕ್​ಬರ್ನ್​ ಮೂಲದವರಾದ ಕೆಲ್ಲಿ ಅನ್ನಾ ಅಲೆಕ್ಸಾಂಡರ್​(43) ತನ್ನ ಕುದುರೆ ಅಲಿಯಾನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದ್ದಕ್ಕಿಂದಂತೆ ರೋಗದಿಂದ ಬಳಲು ಆರಂಭಿಸಿದ ಬಳಿಕ ತನ್ನ ಅಲಿಯಾನ ಕುದುರೆ ಆಕೆಯ ತಲೆಯ ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು ಎಂದು ಅಲೆಕ್ಸಾಂಡರ್​ ಹೇಳಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಅಲೆಕ್ಸಾಂಡರ್​ ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗ ತನಗೆ ಕೆಳ ಮಟ್ಟದ ಮೆದುಳು ಕ್ಯಾನ್ಸರ್​ ಗೆಡ್ಡೆ ಇರುವುದು ಪತ್ತೆಯಾಗಿದೆ.

ಅಂದಹಾಗೆ ತಮ್ಮ ಪತಿ ಕೆವಿನ್​ ಅವರಿಂದ ವಿವಾಹದ ಕೊಡುಗೆಯಾಗಿರುವ ಅಲಿಯಾನ ಜತೆ ಅಲೆಕ್ಸಾಂಡರ್​ ಡ್ರೆಸ್ಸೇಜ್​ ಸ್ಪರ್ಧೆಯಲ್ಲಿ ಭಾಗವಹಿಸಿದ ಖುಷಿ ಹಂಚಿಕೊಂಡಿದ್ದಾರೆ. ಹಾಗೆಯೇ 2015 ರಲ್ಲಿ ಮೊದಲ ಬಾರಿಗೆ ಅನಾರೋಗ್ಯಕ್ಕೆ ತುತ್ತಾದರಂತೆ. ನನ್ನ ಮೊದಲ ಡ್ರೆಸ್ಸೇಜ್​ ಸ್ಪರ್ಧೆ ಮುಗಿದ ಕೆಲವೇ ದಿನಗಳಲ್ಲಿ ರೋಗಗ್ರಸ್ತವಾದೆ. ದಿನವೊಂದಕ್ಕೆ 14 ರಿಂದ 15 ಬಾರಿ ರೊಗಗ್ರಸ್ತವಾಗುತ್ತಿದೆ. ಸಾಕಷ್ಟು ಬಾರಿ ಔಷಧವನ್ನು ತೆಗೆದುಕೊಂಡಿದ್ದೇನೆ. ಆದರೂ ಗುಣಮುಖವಾಗಿರಲಿಲ್ಲ. ಅಲ್ಲದೆ, ಭಯಾನಕ ವಾಸನೆ ಬರುತ್ತಿತ್ತು ಎಂದಿದ್ದಾರೆ.

ಬಳಿಕ ನಾನು ಕೆಲವು ದಿನಗಳವರೆಗೆ ತವರು ಮನೆಗೆ ಹೋದೆ. ಸುಮಾರು 5-6 ವಾರಗಳವರೆಗೆ ಅಲಿಯಾನಳನ್ನು ನೋಡಲೇ ಇಲ್ಲ. ಮರಳಿ ಬಂದ ಬಳಿಕ ಅವಳ ಪ್ರತಿಕ್ರಿಯೆ ತುಂಬಾ ವಿಚಿತ್ರವಾಗಿತ್ತು. ನನ್ನ ತಲೆಯ ಒಂದು ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು. ಬಳಿಕ ಮೆದುಳು ಗಡ್ಡೆ ಇದೆ ಎಂಬುದು ಗೊತ್ತಾಗಿ, ಲಿವಿಂಗ್​ಸ್ಟನ್​​ನಲ್ಲಿರುವ ಸೆಂಟ್​ ಜಾನ್​ ಆಸ್ಪತ್ರೆಗೆ ದಾಖಲಾದೆವು. ಬಳಿಕ ಆಲಿಗೋಡೆಂಡ್ರೊಗ್ಲಿಯೊಮಾ ಮೆದುಳು ಗಡ್ಡೆಗೆ ಚಿಕಿತ್ಸೆ ನೀಡಿದರು ಎಂದು ತಿಳಿಸಿದ್ದಾರೆ.

ಚಿಕಿತ್ಸೆಯ ಬಳಿಕವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಗಿ ಅಲೆಕ್ಸಾಂಡರ್​ ಹೇಳಿಕೊಂಡಿದ್ದಾರೆ. ಕ್ರಮೇಣ ಚೇತರಿಸಿಕೊಂಡ ಅಲೆಕ್ಸಾಂಡರ್​ಗೆ ಆಕೆಯ ಕುದುರೆ ಅಲಿಯಾನ ಸಾಥ್​ ನೀಡಿದ್ದನ್ನು ಸ್ಮರಿಸಿದ್ದಾರೆ. ಇದೀಗ ಅಲೆಕ್ಸಾಂಡರ್​ ಮೆದುಳು ಗಡ್ಡೆ ಕುರಿತಾದ ಸಂಶೋಧನೆ ಮಾಡುತ್ತಿದ್ದು, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.