ಉಪಯುಕ್ತ ಮಾಹಿತಿ

ಹಿಂದೂ ಧರ್ಮದಲ್ಲಿ ಒಂದೇ ಗೋತ್ರ ಇರುವವರಿಗೆ ಮದುವೆ ಮಾಡುವುದಿಲ್ಲ..!ಏಕೆ ಗೊತ್ತಾ..?

By admin

February 07, 2019

ಮದುವೆಯಾಗುವುದು ಪ್ರತಿಯೊಬ್ಬರ ಕನಸು. ತಮಗಿಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗಲು ಪ್ರತಿಯೊಬ್ಬರೂ ಬಯಸ್ತಾರೆ. ದಾಂಪತ್ಯ ಜೀವನ ಪರ್ಯಂತ ಸುಖಕರವಾಗಿರಲೆಂದು ಅಳೆದು ತೂಗಿ ಮದುವೆ ಮಾಡ್ತಾರೆ.

ಹಿಂದೂ ಸಂಪ್ರದಾಯದಲ್ಲಿ ಮದುವೆಗೂ ಮುನ್ನ ಜಾತಕ ನೋಡುವ ಪದ್ಧತಿಯಿದೆ. ಜಾತಕ ಹೊಂದಿಕೆಯಾದ್ರೆ ಮದುವೆ ಮಾತುಕತೆ ಮುಂದುವರೆಯುತ್ತದೆ.ಸಾಮಾನ್ಯವಾಗಿ ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ಗೋತ್ರ ನೋಡಿಯೇ ಜಾತಕ ತೆಗೆದುಕೊಳ್ತಾರೆ. ಒಂದೇ ಗೋತ್ರದವರನ್ನು ಮದುವೆಯಾಗದಿರಲು ಮುಖ್ಯ ಕಾರಣವಿದೆ.

ಸನಾತದ ಧರ್ಮದ ಪ್ರಕಾರ ಒಂದೇ ಗೋತ್ರದವರು ಸಹೋದರ-ಸಹೋದರಿಯಾಗಿರುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಒಂದೇ ಗೋತ್ರದವರನ್ನು ಮದುವೆಯಾಗುವುದಿಲ್ಲ. ಇದಲ್ಲದೆ ಒಂದೇ ಗೋತ್ರದಲ್ಲಿ ಮದುವೆಯಾಗದಿರಲು ಇನ್ನೂ ಅನೇಕ ಕಾರಣಗಳಿವೆ.

ಒಂದೇ ಗೋತ್ರದವರು ಮದುವೆಯಾದ್ರೆ ಸಂತಾನ ಸರಿಯಾಗಿರುವುದಿಲ್ಲಂತೆ. ಮಕ್ಕಳು ವಿಕಲಾಂಗರಾಗ್ತಾರೆ. ಇಲ್ಲವೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಾರಂತೆ. ಗೋತ್ರವನ್ನು ಮೂರು ರೀತಿ ನೋಡಲಾಗುತ್ತದೆ. ಹುಡುಗ, ಹುಡುಗಿ ಗೋತ್ರ, ಅವ್ರ ತಂದೆ-ತಾಯಿ ಗೋತ್ರ ಹಾಗೂ ಅಜ್ಜಿಯ ಗೋತ್ರ. ಈ ಮೂರು ಗೋತ್ರ ಹೊಂದಾಣಿಕೆಯಾದ್ರೆ ಮಾತ್ರ ಮದುವೆಯಾಗಬೇಕು. ಇಲ್ಲವಾದ್ರೆ ಮದುವೆ ತುಂಬಾ ದಿನ ನಡೆಯುವುದಿಲ್ಲವೆಂಬ ನಂಬಿಕೆಯಿದೆ.