ಪೂರ್ವ ಮತ್ತು ಪಶ್ಚಿಮ ಘಟ್ಟಗಳಬೆಸೆಯುವ ಸೇತುವೆ ಎಂದೇ ಕರೆಸಿಕೊಳ್ಳುವಹಾಗೂ ಬಿಳಿ ಬಣ್ಣವನ್ನು ಹೊದ್ದುಕೊಂಡಿರುವಸ್ವಚ್ಛಂದ ಶ್ವೇತ ವರ್ಣದ ಬೆಟ್ಟದಹೆಸರೇ ಶ್ವೇತಾದ್ರಿ.ಇಂತಹದೊಂದು ಅಪರೂಪವಾದ ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯಸ್ಥಳ ಇರುವುದು ಚಾಮರಾಜನಗರ ಜಿಲ್ಲೆಹಾಗೂ ತಾಲೂಕಿನಲ್ಲಿ.
ಹಸಿರು ಸೀರೆಯುಟ್ಟ ನಾರಿಯಂತೆಕಾಣುವ ಆ ಹಚ್ಚಹಸಿರಾದ ಬೆಟ್ಟನೋಡಲು ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ನುಸುಳುವಗಾಳಿಗೆ ಮೈ ಒಡ್ಡಿದರೆ ಆಹಾಸ್ವರ್ಗದ ಸುಖ.ತೇಲುವ ಮೋಡಗಳ ಮಧ್ಯೆ ಬೆಟ್ಟದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಆಹ್ಲಾದಕರ.
ಪ್ರಕೃತಿ ಸೊಬಗನ್ನು ಹೊದ್ದು ಮಲಗಿದಂತೆ ಕಾಣುವ ಈ ಶ್ವೇತಾದ್ರಿ ಬೆಟ್ಟವನ್ನು ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವೆಂದೂ ಕರೆಯುತ್ತಾರೆ. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯಪಕ್ಕದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಈ ಬೆಟ್ಟ ಕಂಡುಬರುತ್ತದೆ. ತಮಿಳುನಾಡಿನ ದಿಂಬ್ಬಂ, ಜೋಡಿಗೆರೆ, ಕಾಡಿಗೆರೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಪ್ರಕೃತಿಹಸಿರು ಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದೆ.
ಒಂದೆಡೆ ಪ್ರಕೃತಿಯ ಮಡಿಲಿನಲ್ಲಿ ಮಲಗಿದ್ದೇವೆ ಎಂಬಂತೆ ಬಾಸವಾದರೆ ಮತ್ತೊಂದೆಡೆ ತುಂಬಿರುವ ಸುವರ್ಣಾವತಿ ಜಲಾಶಯ ಮುದ ನೀಡುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುವರ್ಣಾವತಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ನೀಲಿ ನಕ್ಷೆ ತಯಾರಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ.
ಚಾಮರಾಜನಗರದಿಂದ20 ಕಿ.ಮೀ. ದೂರದಲ್ಲಿರುವ ಸುವರ್ಣಾವತಿಗೆ ಉತ್ತಮ ರಸ್ತೆ ಮತ್ತು ಸಾರಿಗೆ ಸೌಕರ್ಯವಿದ್ದರೂ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಬಹುದು ಎಂಬುದು ಸ್ಥಳೀಯ ಆಗ್ರಹವಾಗಿದೆ.