ವಿಜ್ಞಾನ

ಪ್ರಪಂಚದಲ್ಲೆ ಶಬ್ದದ ವೇಗಕ್ಕಿಂತ ಎರಡು ಪಟ್ಟು ಸ್ಪೀಡ್ ಹೋಗುತ್ತಿದ್ದ ಸೂಪರ್ ಸೋನಿಕ್ ವಿಮಾನ ಬ್ಯಾನ್ ಆಗಿದ್ದು ಯಾಕೆ ಗೊತ್ತಾ?

By admin

February 07, 2020

ಶಬ್ದದ ವೇಗಕ್ಕಿಂತ 2ಪಟ್ಟು ಸ್ಪೀಡಾಗಿ ಚಲಿಸುವ ಈ ವಿಮಾನ 1969 ರಿಂದ 2003 ರವರೆಗೆ ನಿರಂತರವಾಗಿ ಲಕ್ಷಾಂತರ ಜನ ಪ್ರಯಾಣಿಕರನ್ನ ಸುರಕ್ಷಿತವಾಗಿ ಅತಿ ಬೇಗನೆ ತಲುಪಿಸುವಂತಹ ಕೆಲಸವನ್ನು ಮಾಡಿದ ಈ ವಿಮಾನ ಈಗ ಮ್ಯೂಸಿಯಂಯೊಂದರಲ್ಲಿ ಕೇವಲ ಒಂದು ಬೊಂಬೆಯಾಗಿ ನೋಡುವುದಕ್ಕೆ ಕಾಣಲು ಸಿಗುತ್ತದೆ.

1969ರಲ್ಲಿ ರಾಯಲ್ ಏರ್ಕ್ರಾಫ್ಟ್ ಎಸ್ಟಾಬ್ಲಿಷ್ಮೆಂಟ್ ಅಂದರೆ RAE ಡೈರೆಕ್ಟರ್ ಆದ ಅರ್ನಾಲ್ಡ್ ಎಂಬ ವ್ಯಕ್ತಿ ಕಾನ್ ಕಾರ್ಡ್ ಸೂಪರ್ ಸೋನಿಕ್ ಅನ್ನುವ ಒಂದು ಕಾನ್ಸೆಪ್ಟ್ ನನ್ನು ತನ್ನ ತಂಡದ ಮುಂದೆ ಇಡುತ್ತಾರೆ. ಅವರ ಉದ್ದೇಶವೇನೆಂದರೆ ಈ ಪ್ರಪಂಚದಲ್ಲಿ ಎಲ್ಲಾ ವಿಮಾನಗಳಿಗಿಂತ ಅತ್ಯಂತ ವೇಗವಾಗಿ ಚಲಿಸುವ ವಿಮಾನವೊಂದನ್ನು ಪ್ರಯಾಣಿಕರಿಗೆ ಹೇಗಾದರೂ ಮಾಡಿ ನಾವು ಒದಗಿಸಬೇಕೆಂಬುದು ಅವರ ಆಸೆಯಾಗಿತ್ತು. ಇನ್ನು ಅವರ ಆಸೆಯಂತೆ ಒಂದು ವಿಮಾನ ಸಿದ್ಧವಾಗಿತ್ತು. ಗಾಳಿಯಲ್ಲಿ ಶಬ್ದದ ವೇಗ ಗಂಟೆಗೆ 1,235 ಕಿ.ಮೀ ಇರುತ್ತದೆ. ಆದರೆ ಇವರು ಸಿದ್ಧಪಡಿಸಿದ ಕಾನ್ ಕಾರ್ಡ್ ವಿಮಾನ ಗಂಟೆಗೆ 2,170 ಕಿ.ಮೀ. ಚಲಿಸುವಂತಹ ಸಾಮರ್ಥ್ಯವನ್ನ ಹೊಂದಿತ್ತು. ಅಂದರೆ ಶಬ್ದದ ವೇಗಕ್ಕಿಂತ 2 ಪಟ್ಟು ಜಾಸ್ತಿ. ಆದರೆ ಆ ಕಾಲಕ್ಕೆ ಆ ಒಂದು ವಿಮಾನ ಸಿದ್ಧ ಹೊಂದುವುದಕ್ಕೆ ಖರ್ಚಾದ ಹಣ ಭಾರಿ ಮೊತ್ತದು.

ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 1200 ಕೋಟಿ ರೂಪಾಯಿ ಖರ್ಚಾಗಿತ್ತು.ಇನ್ನೂ ಈ ಒಂದು ವಿಮಾನ ಹೆಚ್ಚಾಗಿ ಸಮುದ್ರ ಮಾರ್ಗದಲ್ಲೇ ತನ್ನ ಪ್ರಯಾಣವನ್ನು ಬೆಳೆಸುತ್ತಿತ್ತು. ಏಕೆಂದರೆ ಈ ಒಂದು ವಿಮಾನದಿಂದ ಬರುತ್ತಿದ್ದಂತಹ ಶಬ್ದ ಭಾರಿ ಶಬ್ದವಾಗಿತ್ತು. ಇನ್ನು ಈಗಿರುವ ವಿಮಾನಗಳು 30ರಿಂದ 38 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತವೆ. ಆದರೆ ಈ ಒಂದು ವಿಮಾನ ಅತ್ಯಂತ ವೇಗವಾಗಿ ಚಲಿಸುವುದಕ್ಕೆ ಸುಮಾರು 60 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು. ಇನ್ನೂ ಆಗಿನ ಕಾಲಕ್ಕೆ ಈ ಒಂದು ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಈಗಿನ ಟೀಕೆಟ್ ಗಳ ದರ ಏನ್ನಿದೆ ಅದರ 30 ರಿಂದ 40 ಪಟ್ಟು ಹೆಚ್ಚು ಹಣವನ್ನ ಕೊಡಬೇಕಾಗಿತ್ತು.

ಏಕೆಂದರೆ ಆಗಿನ ಕಾಲದಲ್ಲೇ ಇದರಲ್ಲಿ ಲಂಡನ್ನಿಂದ ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಬೇಕೆಂದರೆ ಸುಮಾರು 7 ಸಾವಿರಕ್ಕೂ ಹೆಚ್ಚು ಡಾಲರ್ ಹಣವನ್ನು ಕೊಡಬೇಕಾಗಿತ್ತು.ಅಂದರೆ ನಮ್ಮ ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ ಸುಮಾರು 5ಲಕ್ಷ ರೂಪಾಯಿ ಆಗುತ್ತದೆ.ಮತ್ತೆ ಈ ಒಂದು ವಿಮಾನದ ಮೇಂಟೆನೆನ್ಸ್ ತುಂಬಾ ಕಷ್ಟವಾದ್ದರಿಂದ ಆರ್ಥಿಕವಾಗಿ ಈ ಒಂದು ವಿಮಾನ ಹೆಚ್ಚಿನ ಲಾಭವನ್ನು ಮಾಡಲಿಲ್ಲ. 1969 ರಿಂದ ಬೇರೆ ವಿಮಾನಗಳಿಗೆ ಹೋಲಿಸಿದರೆ ಈ ಒಂದು ವಿಮಾನದಲ್ಲಿ ಯಾವುದೇ ರೀತಿಯ ಪ್ರಾಣಹಾನಿಗಳಾಗಿರುವ ಘಟನೆ ನಡೆದ್ದಿಲ್ಲ. ಆದರೆ ಜುಲೈ 25,2000ನೇ ಇಸವಿಯಲ್ಲಿ ಜರುಗಿದ ಈ ಘಟನೆ ಕಾನ್ ಕಾರ್ಡ್ ವಿಮಾನವನ್ನ ಇತಿಹಾಸ ಸೇರಿಕೊಳ್ಳುವಂತೆ ಮಾಡಿತು.  ಅವತ್ತಿನ ದಿನ ಟೇಕಾಫ್ ಆಗುವಂತ ಸಮಯದಲ್ಲಿ ಈ ಒಂದು ವಿಮಾನ ಕ್ರ್ಯಾಶ್ ಆಗಿ ಸುಮಾರು 113 ಜನ ಸಾವನ್ನಪ್ಪಿದ್ದರು. ಈ ಘಟನೆಯಾದ ನಂತರ ಆ ವಿಮಾನ ಮತ್ತೆ ಕಾಣಿಸಿಕೊಳ್ಳಲಿಲ್ಲ.

ಮತ್ತೆ ಕೆಲವೊಂದು ಸೇಫ್ಟಿಗಳೊಂದಿಗೆ 2001ರಲ್ಲಿ ಮತ್ತೆ ತನ್ನ ಸೇವೆಯನ್ನ ಆರಂಭಿಸಿದರು 2003ರ ಹೊತ್ತಿಗೆ ಬ್ರಿಟಿಷ್ ಏರ್ ವೇಸ್ ಇದರವೊಂದು ಸೇವೆಯನ್ನ ನಿಲ್ಲಿಸಿತು. ಕಾನ್ ಕಾರ್ಡ್ ವಿಮಾನ ತಂತ್ರಜ್ಞಾನದಲ್ಲಿ ಒಂದು ಅದ್ಭುತ ವಿಮಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವೊಂದು ವಿಮಾನಕ್ಕೆ ಬೇಕಾದಂತಹ ಎನರ್ಜಿ ಮತ್ತೆ ಇವೊಂದು ವಿಮಾನವನ್ನ ಚಲಾಯಿಸಲು ಬೇಕಾದಂತಹ ಇಂಧನ ಇವೆಲ್ಲವನ್ನು ಮೇನ್ಟೇನ್ ಮಾಡುವುದು ತುಂಬಾ ಕಷ್ಟವಾಗಿತ್ತು. ಇಂಧನದ ಬೆಲೆ ಕೂಡ ಹೆಚ್ಚಾಗುತ್ತಿದ್ದುದರಿಂದ ಇದರ ಮೇಂಟೆನೆನ್ಸ್ ತುಂಬಾ ಕಷ್ಟ ಆಗಿತ್ತು. ಆದ್ದರಿಂದ ಬ್ರಿಟಿಷ್ ಏರ್ವೇಸ್ ಇದರ ಸೇವೆಯನ್ನು ನಿಲ್ಲಿಸಿತು. ಈ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವಂತಹ ವಿಮಾನ ಈಗ ಇತಿಹಾಸ ಸೇರಿಕೊಂಡಿದೆ.