ಆರೋಗ್ಯ

ದಿನ ನಿತ್ಯ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..!ತಿಳಿಯಲು ಈ ಮಾಹಿತಿಯನ್ನು ನೋಡಿ…

By admin

November 16, 2018

ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್‌ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್, ಖನಿಜಾಂಶಗಳು ಹೇರಳವಾಗಿರುವುದರಿಂದ ಕೆಲವು ಪ್ರಮುಖ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಬೆಸ್ಟ್ : ಖರ್ಜೂರದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಇದೆ. ಖರ್ಜೂರ ತಿಂದ್ರೆ ನಿಮ್ಮ ಚರ್ಮದಲ್ಲಿನ ಪುನಶ್ಚೈತನ್ಯ ಶಕ್ತಿಯನ್ನು ಕಾಪಾಡಿಕೊಳ್ಳಬಹುದು, ನಿಮ್ಮ ಚರ್ಮವನ್ನು ಮೃದುವಾಗಿಡಲು ಕೂಡ ಅದು ಸಹಕಾರಿ. ಚರ್ಮದ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ. ಆ್ಯಂಟಿ ಏಜಿಂಗ್ ಕೂಡ ಹೌದು.

ಜೀರ್ಣಶಕ್ತಿ ಹೆಚ್ಚಿಸುತ್ತದೆ : ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಿ. ಅದರಿಂದ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ನರಮಂಡಲವನ್ನು ಬಲಪಡಿಸುತ್ತದೆ

ಖರ್ಜೂರ ನಿಮ್ಮ ನರಗಳನ್ನು ಸುವ್ಯವಸ್ಥೆಯಲ್ಲಿಡಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಪೋಷಕಾಂಶಗಳು ಆರೋಗ್ಯ ವೃದ್ಧಿಸುವುದಲ್ಲದೆ ನರಗಳ ಕಾರ್ಯನಿರ್ವಹಣೆಯನ್ನೂ ಸರಿ ಮಾಡುತ್ತವೆ. ಅಷ್ಟೇ ಅಲ್ಲ ಅದರಲ್ಲಿರುವ ಪೊಟ್ಯಾಶಿಯಂ ಮೆದುಳಿನ ಚುರುಕುತನವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.