ಉಪಯುಕ್ತ ಮಾಹಿತಿ

ನೀವು ರಾತ್ರಿ ಮಲಗುವ ಮುಂಚೆ ಇದನ್ನ ಮಾಡಿದ್ರೆ ಹಾರ್ಟ್ ಅಟ್ಯಾಕ್ ಆಗೋದು ತುಂಬಾ ಕಡಿಮೆ!

By admin

December 01, 2018

ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ.

ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ.

ಈ ಅಧ್ಯಯನವನ್ನು ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ 2018 ರಲ್ಲಿ ಮಂಡಿಸಲಾಗಿದೆ. ಆರೋಗ್ಯಕರವಾಗಿದ್ದ ಸುಮಾರು 149 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು.

149 ಜನರ ಪೈಕಿ ಕೆಲವರು ಮಲಗುವುದಕ್ಕೂ ಮುನ್ನ ಯೋಗ ಸಂಗೀತವನ್ನು ಆಲಿಸಿದರೆ, ಇನ್ನು ಕೆಲವರು ಪಾಪ್ ಮ್ಯೂಸಿಕ್ ಗೆ ಕಿವಿಕೊಟ್ಟಿದ್ದರು, ಮತ್ತೆ ಕೆಲವರು ಯಾವುದೇ ಸಂಗೀತವನ್ನೂ ಕೇಳದೇ ಹಾಗೆಯೇ ನಿದ್ದೆ ಮಾಡಿದ್ದರು.

ಸಮೀಕ್ಷೆಗೊಳಪಡಿಸಲಾಗಿದ್ದ ವ್ಯಕ್ತಿಗಳ ಹೃದಯ ಬಡಿತವನ್ನು ಸೆಷನ್ ನಲ್ಲಿಯೂ ಸಂಗೀತ ನಿಲ್ಲುವುದಕ್ಕೆ ಅಥವಾ ನಿಶಬ್ದ ಮೂಡುವುದಕ್ಕೂ 5 ನಿಮಿಷಗಳ ಮುನ್ನ ಮಾಪನ ಮಾಡಲಾಗಿತ್ತು. ಇದರ ಜೊತೆಗೆ ಆಂಕ್ಸೈಟಿ ಮಟ್ಟವನ್ನೂ ಮಾಪನ ಮಾಡಲಾಗಿತ್ತು,

ಯೋಗ ಸಂಗೀತ ಕೇಳುವ ವೇಳೆಯಲ್ಲಿ ಹೃದಯ ಬಡಿತ ವ್ಯತ್ಯಾಸ ಹೆಚ್ಚಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳುವ ವೇಳೆಯಲ್ಲಿ ಇಳಿಕೆಯಾಗಿತ್ತು, ನಿಶಬ್ದವಾಗಿದ್ದಾಗ ಯಾವುದೇ ಬದಲಾವಣೆಗಳೂ ಇರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇನ್ನು ಯೋಗ ಸಂಗೀತ ಕೇಳುತ್ತಿದ್ದವರ ಆಂಕ್ಸೈಟಿ (ಆತಂಕ ಮಟ್ಟ) ಮಟ್ಟ ಕಡಿಮೆಯಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳಿದ ನಂತರ ಹಾಗೂ ಯಾವುದೇ ಸಂಗೀತ ಕೇಳದಿದ್ದಾಗ ಆಂಕ್ಸೈಟಿ ಮಟ್ಟ ಹೆಚ್ಚಿರುವುದು ಸಮೀಕ್ಷೆಯಲ್ಲಿ ದಾಖಲಾಗಿದೆ.