ಆರೋಗ್ಯ

ಹಾರ್ಟ್ ಅಟ್ಯಾಕ್ ಆದ 5 ನಿಮಿಷದ ಒಳಗಡೆ ಈ ಕೆಲಸ ಮಾಡಿದ್ರೆ ಆ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು…

By admin

December 05, 2018

ಮನುಧ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಹೇಳಲಾಗುತ್ತೆ. ಆದ್ರೆ ಅಂತಹ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲೇಬಾರದು.ಅದರಲ್ಲೂ ಕೆಲವೊಂದು ಕಾಯಿಲೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರಕೆ ಇಂದ ಇರಲೇ ಬೇಕು.

ಆದರೆ ಅನೇಕರಿಗೆ ಯಾವುದೇ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಗಾಬರಿಯಿಂದ ಮಾಡಲು ಹೋಗುವುದಿಲ್ಲ.ಆದರೆ ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.

*ಹಾರ್ಟ್ ಅಟ್ಯಾಕ್ ಆದ ವ್ಯಕ್ತಿಯನ್ನು ನೇರವಾಗಿ ಮಲಗಿಸಿ. ಬಟ್ಟೆಗಳನ್ನು ಸಡಿಲಗೊಳಿಸಿ. ಇದು ಸ್ವಲ್ಪ ಆರಾಮ ನೀಡುತ್ತದೆ.

*ಹೃದಯಾಘಾತವಾದ ರೋಗಿಯನ್ನು ಜನರು ಸುತ್ತುವರಿಯದಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಆಮ್ಲಜನಕ ಸಿಗುವಂತೆ ಮಾಡಿ.ಒಳ್ಳೆಯ ಗಾಳಿಯಾಡಿದ್ರೆ ಒಳ್ಳೆಯದು.

*ಹಾರ್ಟ್ ಅಟ್ಯಾಕ್ ಆದ ಕೆಲವರಿಗೆ ವಾಂತಿ ಬಂದಂತೆ ಭಾಸವಾಗುತ್ತದೆ. ಪಕ್ಕಕ್ಕೆ ತಿರುಗಿ ವಾಂತಿ ಮಾಡಲು ಹೇಳಿ. ಹೀಗೆ ಮಾಡಿದ್ರೆ ಶ್ವಾಸಕೋಶದಲ್ಲಿ ವಾಂತಿ ತುಂಬುವುದು ತಪ್ಪುತ್ತದೆ.

*ಹೃದಯಾಘಾತವಾದ ರೋಗಿಯ ಕತ್ತಿನ ಭಾಗಕ್ಕೆ ಕೈ ಹಾಕಿ ನಾಡಿ ಬಡಿತವನ್ನು ಪರೀಕ್ಷಿಸಿ. ನಾಡಿ ಬಡಿತ 60-70ರಷ್ಟಿದ್ದಲ್ಲಿ ರೋಗಿಯ ರಕ್ತದೊತ್ತಡ ಕಡಿಮೆಯಾಗ್ತಿದೆ ಎಂದೇ ಅರ್ಥ. ನಾಡಿ ಬಡಿತ ಇನ್ನೂ ಕಡಿಮೆಯಾಗ್ತಿದ್ದರೆ ಆತನ ಕಾಲುಗಳನ್ನು ಮೇಲಕ್ಕೆತ್ತಿ. ಇದರಿಂದಾಗಿ ಕಾಲಿಗಾಗ್ತಿರುವ ರಕ್ತದ ಪೂರೈಕೆ ಹೃದಯದ ಕಡೆ ಬರುತ್ತದೆ.