ಆರೋಗ್ಯ

ಸೀಬೆಹಣ್ಣಿನಲ್ಲಿರುವ ಆರೋಗ್ಯದ ಗುಟ್ಟು ತಿಳಿದರೆ ನೀವು ಅಚ್ಚರಿ ಪಡುತ್ತೀರಿ! ಈ ಅರೋಗ್ಯ ಮಾಹಿತಿ ನೋಡಿ.

By admin

March 18, 2020

ಸೀಬೆ ಹಣ್ಣು “ಬಡವರ ಸೇಬು” ಎಂದರೆ ಅತಿಶಯೋಕ್ತಿಯೇನಲ್ಲ. ಇದರಲ್ಲಿರುವ ಪೌಷ್ಟಿಕಾಂಶ ಗಳನ್ನು ಅವಲೋಕಿಸಿದಾಗ, ಸೇಬಿನ ಗುಣಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಹಣ್ಣಾಗಿದೆ.

ಸೀಬೆ ಹಣ್ಣಿನ ತವರು ಅಮೆರಿಕ ಆದರೆ ಇದರ ಪ್ರಸ್ತುತ ಎಲ್ಲಾ ಕಡೆಗಳಲ್ಲೂ ಬೆಳೆಯಲಾಗುತ್ತದೆ. ಸೀಬೆ ಹಣ್ಣಿನ – ಬೇರು, ಎಲೆ, ಹೂವು, ಕಾಯಿ, ಹಣ್ಣು ಇವುಗಳೆಲ್ಲವೂ ಉಪಯುಕ್ತ ಭಾಗಗಳಾಗಿವೆ.

ಪೋಷಕಾಂಶಗಳು(100 ಗ್ರಾಂ ಸೀಬೆಹಣ್ಣಿನಲ್ಲಿ ದೊರೆಯುವ ಪೌಷ್ಟಿಕಾಂಶಗಳು ಹೀಗಿವೆ)

ತೇವಾಂಶ-85.3ಸಸಾರಜನಕ- 0.1 ಗ್ರಾಂಮೇದಸ್ಸು – 0.2 ಗ್ರಾಂಖನಿಜಾಂಶ – – 0.6 ಗ್ರಾಂಕಾರ್ಬೋಹೈಡ್ರೇಟ್ಸ್ – 9.6 ಗ್ರಾಂಕ್ಯಾಲ್ಸಿಯಂ – 50 ಮಿಲಿಗ್ರಾಂಸೀಬೆ ಯಲ್ಲಿರುವ ಔಷಧೀಯ ಗುಣಗಳು

1. ಸ್ತ್ರೀಯರ ಅತಿ ರಕ್ತಸ್ರಾವ: ಸ್ತ್ರೀಯರ ಅತಿ ರಕ್ತಸ್ರಾವ ತೊಂದರೆಗಳಲ್ಲಿ ಸೀಬೆಯ ಬೇರಿನ ರಸ ದೊಂದಿಗೆ ಜೇನುತುಪ್ಪದ 1 ಚಮಚದಷ್ಟು ಬೆರಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಪರಿಣಾಮಕಾರಿ.

2. ಗಾಯಗಳು: ಗಾಯಗಳಿಗೆ ಹಾಗೂ ಹಳೆಯದಾದ ಹುಣ್ಣುಗಳಿಗೆ ಸೀಬೆ ಎಲೆಗಳನ್ನು ಜಜ್ಜಿ ರಸವನ್ನು ಹಚ್ಚುವುದರಿಂದ ಗಾಯಗಳು, ಹುಣ್ಣುಗಳು ಬೇಗನೇ ವಾಸಿಯಾಗುತ್ತವೆ.

3. ಬಾಯಿ ಹುಣ್ಣು: ಬಾಯಿ ಹುಣ್ಣಿಗೆ ಸೀಬೆ ಚಿಗುರುಗಳಿಂದ ಕಷಾಯ ತಯಾರಿಸಿ ಅದಕ್ಕೆ ಸ್ವಲ್ಪ ಉಪ್ಪು ಬೆರಸಿ ದಿನಕ್ಕೆ 3-4 ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ವಾಸಿ ಆಗುತ್ತದೆ.

4. ಹುಳುಕಲ್ಲು-ಹಲ್ಲುನೋವು: ಪ್ರತಿದಿನ ಸೀಬೆ ಗಿಡದ ಚಿಗುರಲೆಯಿಂದ ಹಲ್ಲುಜ್ಜುತ್ತಿದ್ದರೆ ಹಲ್ಲು ಗಟ್ಟಿಯಾಗುತ್ತದೆ. ಹುಳುಕಲ್ಲು-ಹಲ್ಲುನೋವಿಗೆ ಎಲೆಯನ್ನು ಜಗಿಯುವುದರಿಂದ ಪ್ರಯೋಜನವಾಗುತ್ತದೆ.

5.ಬೆವರಿನ ದುರ್ನಾತ: ಸೀಬೆ ಎಲೆಗಳನ್ನು ನುಣ್ಣಗೆ ಅರೆದು ಮೈಗೆ ಚೆನ್ನಾಗಿ ತಿಕ್ಕಿಕೊಂಡು, ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಬೆವರಿನ ದುರ್ನಾತ ದೂರವಾಗುವುದು.

6. ಆಮಶಂಕೆ: ಆಮಶಂಕೆ ಉಂಟಾದಾಗ ಸೀಬೆ ಚಿಗುರನಿಂದ ಕಷಾಯ ತಯಾರಿಸಿ ಮಜ್ಜಿಗೆ ಯೊಂದಿಗೆ ಸೇವಿಸುವುದರಿಂದ ಆಮಶಂಕೆ ನಿಯಂತ್ರಣಗೊಳ್ಳುವುದು,

7. ಚರ್ಮ ರೋಗಗಳು: ಸೀಬೆ ಎಲೆ ಗಳೊಂದಿಗೆ 2-3 ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ ನುಣ್ಣಗೆ ಅರೆದು – ತುರಿ, ಕಜ್ಜಿ, ತುರಿಕೆ ಮುಂತಾದ ಚರ್ಮ ರೋಗಗಳಿಗೆ ಹಚ್ಚುವುದರಿಂದ ಉಪಶಮನ ದೊರೆಯುವುದು.

8. ಎರಡು ಜಾತಿಗಳು: ಸೀಬೆ ಹಣ್ಣಿನಲ್ಲಿ ಕೆಂಪು ಮತ್ತು ಬಿಳಿ ಎಂಬ ಎರಡು ಜಾತಿಗಳಿವೆ. ಆದರೆ ಔಷಧೀಯ ಗುಣಗಳಲ್ಲಿ, ಪೌಷ್ಟಿಕಾಂಶಗಳಲ್ಲಿ ವ್ಯತ್ಯಾಸವು ಆದರೆ ಹಣ್ಣಿನಲ್ಲಿ ಕೆಂಪು

9. ಪಿತ್ತದ ಗಂಧೆಗಳು: ಸೀಬೆ ಚಿಗುರು, ಅರಿಶಿನ ಪುಡಿ, ಮೆಂತ್ಯ, ಹಾಗಲಕಾಯಿ ರಸ, ಕೊತ್ತಂಬರಿ ಬೀಜ ಇವುಗಳನ್ನು ಸೇರಿಸಿ ಚೆನ್ನಾಗಿ ಅರೆದು ಲೇಪಿಸಿರುವುದರಿಂದ ಪಿತ್ತದ ಗಂಧೆಗಳು ನಿವಾರಣೆಯಾಗುತ್ತವೆ.