ಕೆಲವೊಮ್ಮೆ ನಮ್ಮ ದೇಹದ ಒಳಗೆ ಆಹಾರ ಅಥವಾ ನೀರಿನ ಮೂಲಕ ಸೇರಿಕೊಂಡ ಕಲ್ಮಶಗಳು ನಮಗೆ ಹೊಟ್ಟೆ, ತೊಳಸುವುದ, ವಾಂತಿಯಂತಹ ಕಾಯಿಲೆಗಳನ್ನು ತಂದೊಡ್ಡುತ್ತದೆ. ಮತ್ತು ಈ ಸಮಸ್ಯೆಗೆ ತಲೆ ನೋವಿನಂತಹ ಬೇರೆ ಕಾರಣಗಳೂ ಇರಬಹುದು. ಆದರೆ ನೀವು ಕೆಲವು ಉಪಾಯ ಅನುಸರಿಸಿ ಈ ಸಮಸ್ಯೆ ಇಂದ ಪಾರಾಗಬಹುದು…
1. ದೀರ್ಘವಾಗಿ ಉಸಿರಾಡುವುದು.
ವಾಂತಿ ಹೊಟ್ಟೆಯಲ್ಲಿ ತೊಳಸಿದದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ನೀವು ಮೊದಲು ಮಾಡಬೇಕಾಗಿರುವುದು ದೀರ್ಘವಾದ ಉಸಿರಾಟ. ಮೊದಲು ದೀರ್ಘವಾಗಿ ಒಳ್ಳೆಯ ಗಾಳಿಯನ್ನು( ಆಮ್ಲಜನಕವನ್ನು ) ದೇಹದೊಳಗೆ ತೆಗೆದುಕೊಳ್ಳಬೇಕು. ನಂತರ ನಿಧಾನವಾಗಿ ಉಸಿರನ್ನು ಬಿಡಬೇಕು. ಹೀಗೆ ಸ್ವಲ್ಪ ಸಮಯದವರೆಗೂ ನೀವು ಮಾಡಬೇಕು. ಇದರಿಂದ ದೇಹಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ. ಮತ್ತು ಶ್ವಾಶಕೋಶಕ್ಕೆ ಒಳ್ಳೆಯ ವ್ಯಾಯಾಮ ವಾಗುತ್ತದೆ ಮತ್ತು ಅಲ್ಲಿ ಏನಾದರೂ ವಿಷಮಯ ಅಂಶವಿದ್ದರೆ ಹೊರಗೆ ಬರುತ್ತದೆ.
2. ಬಿಸಿ ನೀರು ನೀವು ಬಿಸಿ ನೀರು ಕುಡಿಯಿರಿ ಈ ರೀತಿಯ ಸಮಸ್ಯೆಗಳಿಗೆ ಇದು ಒಂದು ಪರಿಹಾರವಾಗಿದೆ.ಹೀಗೆ ಮಾಡುವುದರಿಂದ ಸ್ವಲ್ಪ ಆರಾಮು ದೊರೆಯುತ್ತದೆ.
3. ಹಣ್ಣಿನ ರಸ ವಾಂತಿ ಹೊಟ್ಟೆಯಲ್ಲಿ ತೊಳಸಿದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ಸಾಮಾನ್ಯ ಊಟ ಸೇರುವುದಿಲ್ಲ. ಅದಕ್ಕಾಗಿ ಎಳನೀರು, ಕಿತ್ತಳೆರಸ ಮುಂತಾದ ಜ್ಯೂಸ್ ಸೇವಿಸಿ. ಮತ್ತು ನೀರನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಡಿ ಹೈಡ್ರೇಷನ್ ಆಗದಂತೆ ತಡೆಯಬಹುದು.
4. ನಿಂಬೆ ಹಣ್ಣಿನ ವಾಸನೆ ಸೇವಿಸಿ. ವಾಂತಿ ಹೊಟ್ಟೆಯಲ್ಲಿ ತೊಳಸಿದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ನಿಂಬೆ ಹಣ್ಣಿನ ಸುವಾಸನೆಯನ್ನು ಸೇವಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.
5. ಹಸಿ ಶುಂಠಿ ಶುಂಠಿ ಕೂಡ ವಾಂತಿ ಹೊಟ್ಟೆಯಲ್ಲಿ ತೊಳಸಿದಂತೆ ಆಗುವುದು ಈ ರೀತಿಯ ಸಮಸ್ಯೆಗಳಿಗೆ ರಾಮಬಾಣ. ಹಸಿ ಶುಂಠಿ ಚೂರನ್ನು ಈ ಸಮಯದಲ್ಲಿ ಸೇವಿಸಿ. ಇಲ್ಲವೇ ಬಿಸಿ ನೀರಿಗೆ ಜೇನು ತುಪ್ಪ ಶುಂಠಿ ಬೆರಸಿ ಸೇವಿಸಿ.
ಈ ಸಮಸ್ಯೆಗೆ ಇನ್ನು ಮುಂತಾದ ಉಪಾಯಗಳಿವೆ. ವೈದ್ಯರ ಹೋಗುವ ಮೊದಲು ನಿಮಗೇನಾದರೂ ತುರ್ತಿನ ಸಮಯದಲ್ಲಿ ಈ ಮೇಲಿನ ಉಪಾಯಗಳನ್ನು ಅನುಸರಿಸಿ ಸಮಸ್ಯೆ ಇಂದ ಪಾರಾಗಿ.