ಸುದ್ದಿ

ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿದರೆ ಏನು ಪ್ರಯೋಜನಗಳು ಗೊತ್ತಾ…?

By admin

August 23, 2019

ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. ಬಿಸಿ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ವೈದ್ಯಕೀಯ ಲೋಕ ಕೂಡ ಒಪ್ಪಿಕೊಂಡಿದೆ.

ಊಟದ ಜೊತೆಗೆ ಒಂದು ಲೋಟ ಬಿಸಿ ನೀರು ಸೇವನೆ ಒಳ್ಳೆಯದು ಅನ್ನೋದು ಆಯುರ್ವೇದ ವೈದ್ಯರ ಸಲಹೆ. ಚೀನಾ ಮತ್ತು ಜಪಾನ್ ನಲ್ಲಿ ಊಟದ ಜೊತೆ ಬಿಸಿಬಿಸಿ ಚಹಾ ಕುಡಿಯುವ ಪದ್ಧತಿಯಿದೆ. ಹಾಗಂತ ಅದೇನು ಮಸಾಲಾ ಟೀ ಅಲ್ಲ, ಬಿಸಿ ನೀರಿಗೆ ಸ್ವಲ್ಪ ಗ್ರೀನ್ ಟೀ ಹಾಕಿಕೊಂಡು ಕುಡಿಯುವುದು.

ಜಪಾನ್ ನಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಬ್ರಷ್ ಮಾಡುವುದಕ್ಕೂ ಮುನ್ನ 4 ಗ್ಲಾಸ್ ಬಿಸಿನೀರು ಕುಡಿಯುತ್ತಾರೆ. ಮೊದಲು ಒಂದು ಗ್ಲಾಸ್ ನಿಂದ ಈ ಥೆರಪಿ ಆರಂಭಿಸಿ, ನಿಧಾನವಾಗಿ 4 ಗ್ಲಾಸ್ ಗೆ ಹೆಚ್ಚಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಸೇವಿಸುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಹೊಟ್ಟೆ ಊದಿಕೊಳ್ಳುವುದು, ಹೊಟ್ಟೆ ನೋವು ಎಲ್ಲವನ್ನೂ ಇದು ಕಡಿಮೆ ಮಾಡುತ್ತದೆ.

ಬಿಸಿನೀರು ಸೇವನೆ ಚರ್ಮಕ್ಕೂ ಹೊಳಪು ತರಬಲ್ಲದು. ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬಿಸಿನೀರು ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಹಾಗಾಗಿ ಚರ್ಮಕ್ಕೆ ಹೊಳಪು ಬರುತ್ತದೆ. ಬಿಸಿನೀರು ಸೇವನೆ ಹಸಿವನ್ನು ಉತ್ತೇಜಿಸುತ್ತದೆ. ನೀರಿನ ಬಿಸಿಯನ್ನು ಕಡಿಮೆ ಮಾಡಲು ನಮ್ಮ ದೇಹ ಶ್ರಮಿಸುತ್ತದೆ, ಇದರಿಂದ ಚಯಾಪಚಯ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ನಿಮ್ಮ ದೇಹ ಹೆಚ್ಚು ಆಹಾರವನ್ನು ಬೇಡುತ್ತದೆ.

ಜೀರ್ಣಕ್ರಿಯೆಗೂ ಬಿಸಿನೀರು ಸೇವನೆ ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದ್ರೆ ನಿಮ್ಮ ಕಿಡ್ನಿ ಮತ್ತು ಲಿವರ್ ಕಾರ್ಯಾಚರಣೆ ಉತ್ತಮಗೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗಂಟಲು ಕೆರೆತ, ಶೀತ ಇವೆಲ್ಲದರಿಂದ್ಲೂ ಪಾರಾಗಬಹುದು. ಶೀತವಾದಾಗ ಕೂಡ ಬಿಸಿನೀರನ್ನೇ ಕುಡಿಯುವುದು ಉತ್ತಮ.

ಮುಟ್ಟಿನ ಸೆಳೆತ ಮತ್ತು ನೋವಿನಿಂದ್ಲೂ ಬಿಸಿನೀರು ಪರಿಹಾರ ಒದಗಿಸುತ್ತದೆ. ಹೊಟ್ಟೆನೋವು ಬಂದಾಗ ಬಿಸಿನೀರಿನ ಬ್ಯಾಗ್ ಅನ್ನು ಹೊಟ್ಟೆಮೇಲಿಟ್ಟುಕೊಂಡರೆ ರಿಲೀಫ್ ಸಿಗುತ್ತದೆ. ಬಿಸಿನೀರನ್ನು ಕುಡಿಯುವದರಿಂದ್ಲೂ ನೋವು ಕಡಿಮೆಯಾಗುತ್ತದೆ. ಬೇಗ ವೃದ್ಧಾಪ್ಯ ನಿಮ್ಮನ್ನು ಆವರಿಸಿಕೊಳ್ಳದಂತೆ ಬಿಸಿನೀರು ತಡೆಯುತ್ತದೆ. ಬಿಸಿನೀರು ದೇಹದಿಂದ ಟಾಕ್ಸಿನ್ ಗಳನ್ನು ಹೊರಹಾಕುವುದರಿಂದ ನಿಮ್ಮ ಚರ್ಮ ಬೇಗನೆ ಸುಕ್ಕಾಗುವುದಿಲ್ಲ.