ಸುದ್ದಿ

ಹಾಸನಾಂಬೆ ದೇವಿಯಾ ದರ್ಶನೋತ್ಸವಕ್ಕೆ ಇಂದು ಕೊನೆ…!

By admin

October 29, 2019

ಹಾಸನದ ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಇಂದು ಗಣ್ಯರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು.

ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುವ ಮುನ್ನಾ ದಿನವಾದ ಇಂದು ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತುಲ. ಬೆಳಗ್ಗೆಯಿಂದಲೂ ದೇವಾಲಯದ ಒಳ-ಹೊರಗು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಇಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ನಟ ಸೃಜನ್ ಲೋಕೇಶ್, ಶಾಸಕರಾದ ಸಿ.ಎಸ್.ಪುಟ್ಟರಾಜು, ಶ್ರೀಕಂಠೇಗೌಡ, ವಿನಯ್ ಗುರೂಜಿ ಅವರು ತಾಯಿಯ ದರ್ಶನ ಪಡೆದರು.

ಇನ್ನು ಹಾಸನಾಂಬ ದೇವಿ ಒಂದು ವರ್ಷಗಳ ಕಾಲ ದೊರೆಯುವುದಿಲ್ಲ ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಹಾಗೂ ಜಿಲ್ಲಾಡಳಿತ ಸಮ್ಮುಖದಲ್ಲಿ ಮಧ್ಯಾಹ್ನ 12.30ಕ್ಕೆ ಅರ್ಚಕರು ಬಾಗಿಲು ಮುಚ್ಚಲಿದ್ದಾರೆ. 13 ದಿನಗಳ ದರ್ಶನೋತ್ಸವದಲ್ಲಿ 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವರೆಗೆ 4ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ದೇವಿ ದರ್ಶನ ಪಡೆದಿದ್ದಾರೆ. ಸದ್ಯ ಮಹಾ ಮಂಗಳಾರತಿ ನಂತರ ಜಿಲ್ಲಾಡಳಿತ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಿದೆ.