ಸುದ್ದಿ

ಜುಲೈ 2ಕ್ಕೆ ಸೂರ್ಯ ಗ್ರಹಣ; ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮಗಳೇನು?

By admin

July 02, 2019

ಜುಲೈ 2, 2019ರಂದು ಸಂಪೂರ್ಣ ಸೂರ್ಯ ಗ್ರಹಣ ಆಗಲಿದೆ. ಈ ಸೂರ್ಯ ಗ್ರಹಣವು ರಾತ್ರಿ 10.25ಕ್ಕೆ (ಭಾರತೀಯ ಕಾಲಮಾನ) ಸಂಭವಿಸಲಿದೆ. ಈ ಗ್ರಹಣವು 4.33 ನಿಮಿಷಗಳ ಕಾಲ ಸಂಭವಿಸಲಿದೆ. ಆ ಸಂದರ್ಭದಲ್ಲಿ ಸೂರ್ಯ ಸಂಪೂರ್ಣವಾಗಿ ಚಂದ್ರನ ನೆರಳಲ್ಲಿ ಮರೆಯಾಗುತ್ತದೆ. ಈ ಗ್ರಹಣವು ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಪೆಸಿಫಿಕ್ ಸಾಗರದಿಂದ ಗೋಚರವಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ,

ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನುಷ್ಯರ ದೇಹದ ಮೇಲೂ ಈ ಗ್ರಹಣದ ಪ್ರಭಾವ ಆಗುತ್ತದೆ ಎಂಬ ನಂಬಿಕೆ ಇದೆ. ಅದು ದೈಹಿಕ ಹಾಗೂ ಮಾನಸಿಕ ಪರಿಣಾಮ ಎರಡೂ ಹೌದು.

ಸೂರ್ಯ ಗ್ರಹಣಕ್ಕೆ ಸಂಬಂಧಿಸಿದಂತೆ ಪಾಲನೆ ಮಾಡಬೇಕಾದದ್ದು ಹಾಗೂ ಆ ಅವಧಿಯಲ್ಲಿ ಏನು ಮಾಡಬಾರದು ಎಂಬ ವಿವರಣೆ ಇಲ್ಲಿದೆ. ಗ್ರಹಣ ಸಮಯದಲ್ಲಿ ಪಾಲನೆ ಮಾಡಬೇಕಾದ ಗ್ರಹಣದ ನಂತರ ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡಿ * ಗ್ರಹಣದ ನಂತರ ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಬೇಕು * ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು. ಒಂದು ವೇಳೆ ಬಂದರೆ ಗರ್ಭದಲ್ಲಿರುವ ಮಗುವಿಗೆ ತೊಂದರೆ ಆಗುತ್ತದೆ

ಸಿದ್ಧಪಡಿಸಿದ್ದ ಆಹಾರವನ್ನು ಗ್ರಹಣದ ನಂತರ ಬಳಸಬಾರದು * ಗ್ರಹಣದ ಮುಂಚೆ ಸಿದ್ಧಪಡಿಸಿದ್ದ ಆಹಾರವನ್ನು ಗ್ರಹಣ ಮೋಕ್ಷದ ನಂತರ ಬಳಸಬಾರದು. ಯಾವ ಆಹಾರ ಪದಾರ್ಥವನ್ನು ಬಿಸಾಡಲು ಸಾಧ್ಯವಿಲ್ಲವೋ ಅಂಥದ್ದಕ್ಕೆ ದರ್ಭೆ ಹಾಗೂ ತುಳಸಿ ಹಾಕಿಡಬೇಕು. (ಉದಾ: ತುಪ್ಪ, ಬೆಣ್ಣೆ, ಹಾಲು, ಮೊಸರು ಇತ್ಯಾದಿ) ಗ್ರಹಣದ ನಂತರ ದೇವರ ಆರಾಧನೆ